image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ವಿದೇಶ

ದಾಳಿ ಆರಂಭಿಸಿದರೆ ಇಡೀ ಮಧ್ಯಪ್ರಾಚ್ಯ ಭಸ್ಮವಾಗುತ್ತದೆ: ಆಯತೊಲ್ಲಾ ಅಲಿ ಖಮೇನಿ

ದಾಳಿ ಆರಂಭಿಸಿದರೆ ಇಡೀ ಮಧ್ಯಪ್ರಾಚ್ಯ ಭಸ್ಮವಾಗುತ್ತದೆ: ಆಯತೊಲ್ಲಾ ಅಲಿ ಖಮೇನಿ

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವಿನ ವಾಗ್ಯುದ್ಧ ಈಗ ಯುದ್ಧದ ಅಂಚಿಗೆ ಬಂದು ನಿಂತಿದೆ. ಇರಾನ್ ಮೇಲೆ ಅಮೆರಿಕ ಏನಾದರೂ ಮಿಲಿಟರಿ ದಾಳಿ ನಡೆಸಿದರೆ, ಅದು ಕೇವಲ ಇರಾನ್‌ಗೆ ಸೀಮಿತವಾಗದೆ ಇಡೀ ಮಧ್ಯಪ್ರಾಚ್ಯವನ್ನು ಆವರಿಸುವ ಮಹಾ ಯುದ್ಧವಾಗಿ ಪರಿಣಮಿಸಲಿದೆ ಎಂದು ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ತೀವ್ರ ಎಚ್ಚರಿಕೆ ನೀಡಿದ್ದಾರೆ. ಇರಾನ್‌ನಲ್ಲಿ ನಡೆಯುತ್ತಿರುವ ಆಂತರಿಕ ಪ್ರತಿಭಟನೆಗಳ ದಮನದ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅರೇಬಿಯನ್ ಸಮುದ್ರಕ್ಕೆ ಬೃಹತ್ ನೌಕಾಪಡೆಯನ್ನು ರವಾನಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 86 ವರ್ಷದ ಖಮೇನಿ ಅವರು ಟೆಹ್ರಾನ್‌ನಲ್ಲಿ ಮಾತನಾಡುತ್ತಾ, ಅಮೆರಿಕನ್ನರು ಇದನ್ನು ತಿಳಿದುಕೊಳ್ಳಲಿ, ಒಂದು ವೇಳೆ ಅವರು ಯುದ್ಧ ಆರಂಭಿಸಿದರೆ, ಈ ಬಾರಿ ಅದು ಪ್ರಾದೇಶಿಕ ಯುದ್ಧವಾಗಲಿದೆ. ನಾವು ಯಾರ ಮೇಲೆಯೂ ಮೊದಲು ದಾಳಿ ಮಾಡಲು ಇಷ್ಟಪಡುವುದಿಲ್ಲ. ಆದರೆ ನಮ್ಮ ಮೇಲೆ ದಾಳಿ ಮಾಡುವವರಿಗೆ ಅಥವಾ ಕಿರುಕುಳ ನೀಡುವವರಿಗೆ ನಾವು ಸಿಡಿಲಿನಂತಹ ಏಟು ನೀಡಲಿದ್ದೇವೆ ಎಂದು ಗುಡುಗಿದ್ದಾರೆ. ಇರಾನ್ ಪ್ರಾಂತ್ಯದಲ್ಲಿ ಭದ್ರತೆ ಕಾಪಾಡುವ ನೆಪದಲ್ಲಿ ಅಮೆರಿಕವು ತನ್ನ ಬಲಿಷ್ಠ ವಿಮಾನವಾಹಕ ನೌಕೆ USS ಅಬ್ರಹಾಂ ಲಿಂಕನ್ ಮತ್ತು ಇತರ ಯುದ್ಧನೌಕೆಗಳನ್ನು ನಿಯೋಜಿಸಿದೆ. ಟ್ರಂಪ್ ಅವರ ಈ ನಡೆಯನ್ನು ಇರಾನ್ ಮಾನಸಿಕ ಯುದ್ಧ ಎಂದು ಕರೆದಿದೆ. ಆದರೂ, ಇರಾನ್ ಅಧಿಕಾರಿಗಳು ರಹಸ್ಯವಾಗಿ ಮಾತುಕತೆ ನಡೆಸಲು ಉತ್ಸುಕರಾಗಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.

Category
ಕರಾವಳಿ ತರಂಗಿಣಿ