ತೇವಾಂಶದಿಂದ ಕೂಡಿದ ಕೆರೆಯಂಗಳದಲ್ಲಿ ಹರಡಿಕೊಂಡು ಬೆಳೆಯುವ ಈ ಪುಟ್ಟ ಗಿಡ ಔಷಧಿಯ ಗುಣಗಳ ಆಗರ ಎಂದರೆ ತಪ್ಪಾಗಲಾರದು. ಇದನ್ನು ಜಲ ಹಿಪ್ಪಲಿ, ಕೆರೆಹಿಪ್ಪಲಿ ಮುಂತಾದ ಹೆಸರುಗಳಿಂದ ಗ್ರಾಮೀಣ ಭಾಗಗಳಲ್ಲಿ ಕರೆಯುತ್ತಾರೆ. ಇದು ನೀರನ್ನು ಹಿಡಿದಿಡುವ ಮೂಲಕ ತಾನಿರುವ ಸ್ಥಳವನ್ನು ತಂಪಾಗಿರಿಸುವುದು. ಮಣ್ಣಿನ ಸವಕಳಿ ತಡೆಯುತ್ತದೆ. ಕೆಲವು ಕಡೆಗಳಲ್ಲಿ ಉದ್ಯಾನಗಳ ಹುಲ್ಲು ಹಾಸಿನ ಬದಲಾಗಿ ಇದನ್ನು ಬೆಳೆಸಲಾಗುತ್ತದೆ. ಕೆಲವು ದೇಶಗಳಲ್ಲಿ ಇದರ ಎಲೆಯ ಟೀ ಮಾಡಿ ಬಳಸುತ್ತಾರೆ. ಈ ಸಸ್ಯವು ಅತಿಯಾಸಿಸ್, ಮಲಬದ್ಧತೆ ಮತ್ತು ಮೊಣಕಾಲು ನೋವಿನ ಚಿಕಿತ್ಸೆಯಲ್ಲಿ ಹೆಚ್ಚು ಸಹಾಯಕವಾಗಿದೆ. ಆಯುರ್ವೇದ, ಸಿದ್ದವೈದ್ಯ ಮತ್ತು ಮನೆ ಮದ್ದಿನಲ್ಲಿ ನೆಲ ಹಿಪ್ಪಲಿ ಸಸ್ಯವನ್ನು ಬಳಸಲಾಗುತ್ತದೆ.
ಸಸ್ಯದ ರಸವನ್ನು ಉಪಯೋಗಿಸುವುದರಿಂದ ಸಣ್ಣ ಗ್ಯಾಸ್ಟಿಕ್ ಸಮಸ್ಯೆ ಜ್ವರ, ಕೆಮ್ಮು, ಶೀತ, ನಕಡಿಮೆಯಾಗುತ್ತದೆ.
ಕೆಮ್ಮು ಮತ್ತು ಶೀತಗಳಿಗೆ ಸಸ್ಯದ ಸುವಾಸನೆಯನ್ನು ತೆಗೆದುಕೊಂಡರೆ ಶೀತ ಕಡಿಮೆಯಾಗುತ್ತದೆ.
ಬಾಹು ನೋವುಗಳಿಗೆ ನೆಲ ಹಿಪ್ಪಲಿ ಎಲೆಗಳನ್ನು ಅರೆದು ಲೇಪಿಸಿದರೆ ಉತ್ತಮ.
ತಲೆ ಹೊಟ್ಟು ನಿವಾರಿಸಲು ಇದರ ಎಲೆಗಳನ್ನು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಎರಡು ಗಂಟೆ ನಂತರ ಸ್ನಾನ ಮಾಡುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.
ಈ ಸಸ್ಯವು ತಂಪುಕಾರಿ ಆಗಿರುವುದರಿಂದ ಇದರ ಸೇವನೆಯಿಂದ ಉದರರೋಗಗಳನ್ನು ಗುಣಪಡಿಸಬಹುದು.
ತಾಜಾ ಎಲೆಗಳನ್ನು ಅಗಿದು ಬಾಯಿ ಮುಕ್ಕಳಿಸುವುದರಿಂದ ವಸಡಿನ ರಕ್ತಸ್ರಾವ ನಿಲ್ಲುವುದು
ದಿನವೂ 4-5 ತಾಜಾ ಎಲೆಗಳನ್ನು ತಿನ್ನುವುದರಿಂದ ಮೂಲವ್ಯಾಧಿ ಗುಣವಾಗುವುದು.
ಎಲೆಯ ಪೇಸ್ಟ್ ಮಾಡಿ ಹಚ್ಚುವುದರಿಂದ ಚರ್ಮದ ತುರಿಕೆ ಶಮನವಾಗುವುದು.
ಸಸ್ಯದ ಕಷಾಯ ಅಲ್ಸರ್‌ಗೆ ಉತ್ತಮ ಚಿಕಿತ್ಸೆಯಾಗಿದೆ.
✍ ಲಲಿತಶ್ರೀ ಪ್ರೀತಂ ರೈ