ಜನಪದಿಯವಾಗಿ ನವಿಲು ಜುಟ್ಟು ಎಂದು ಕರೆಯಲಾಗುವ ಮಯೂರಶಿಖೆ ಗಿಡವನ್ನು ಇಂಗ್ಲೀಷ್ ಭಾಷೆಯಲ್ಲಿ ಪೀಕಾಕ್ ಕ್ರೀಸ್ಟ್ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾದ ಸಸ್ಯವಾಗಿದ್ದು, ಇದು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಸಹಾಯ ಮಾಡಿ ದುಷ್ಟಶಕ್ತಿಗಳನ್ನು ದೂರವಿಡುತ್ತದೆ ಎಂದು ಕೆಲವು ಕಡೆಗಳಲ್ಲಿ ನಂಬುತ್ತಾರೆ.ಈ
ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಧನಾತ್ಮಕ ಶಕ್ತಿ ಹರಡುತ್ತದೆ ಮತ್ತು ಮನೆಯಲ್ಲಿ ಸಂತೋಷ, ಸಮೃದ್ಧಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಈ ಗಿಡವನ್ನು ಮನೆಮದ್ದು ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿಗಳಲ್ಲಿ ಕೂಡ ಬಳಸಲಾಗುತ್ತದೆ. ಮಯೂರಶಿಖೆಯನ್ನು ಪೂಜೆ, ಹೋಮ ಹವನಗಳಲ್ಲಿ ಕೂಡ ಬಳಸಲಾಗುತ್ತದೆ.
ಮಯೂರಶಿಖೆ ಗಿಡದ ಎಲೆಗಳನ್ನು ಚರ್ಮದ ಸೋಂಕಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಜ್ವರ, ಮಲೇರಿಯಾ, ಕಾಮಾಲೆ, ಜಠರ ಹಾಗೂ ಕಿವಿಯ ಸಮಸ್ಯೆಯಲ್ಲಿ ಸಸ್ಯದ ಸಮೂಲವನ್ನು ಬಳಸಲಾಗುತ್ತದೆ.
ಕಿವಿಯ ತೊಂದರೆಯಲ್ಲಿ ಮಯೂರಶಿಖೆಯ ಎಣ್ಣೆ ಸ್ವಲ್ಪ ಬಿಸಿ ಮಾಡಿ ಕಿವಿಗಳಿಗೆ ಎರಡು ಹನಿ ಹಾಕಿದರೆ ಕಿವಿಯ ತೊಂದರೆ ಕಡಿಮೆ ಆಗುತ್ತದೆ.
ರಕ್ತ ಸುರಿಯುತ್ತಿರುವ ಗಾಯಗಳ ಮೇಲೆ ಮಯೂರಶಿಕಖೆಯ ಚೂರ್ಣವನ್ನು ಹಾಕುವುದರಿಂದ ರಕ್ತ ಬೇಗನೆ ಹೆಪ್ಪುಗಟ್ಟಿ ರಕ್ತಸ್ರಾವ ನಿಲ್ಲುತ್ತದೆ.
ಶ್ವಾಸಕೋಶದ ಚಿಕಿತ್ಸೆಗೂ ಮಯೂರ ಶಿಖೆ ಬಳಸಲಾಗುತ್ತದೆ.
✍ ಲಲಿತಶ್ರೀ ಪ್ರೀತಂ ರೈ