ಮಂಗಳೂರು : ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ನಿತಿನ್ ರೈ ಕಕ್ಕುವಳ್ಳಿ ನುಳಿಯಾಲು ನಿರ್ದೇಶನದ ಧರ್ಮ ಚಾವಡಿ ತುಳು ಚಿತ್ರ ಕರಾವಳಿಯಾದ್ಯಂತ ಶುಕ್ರವಾರ ತೆರೆ ಕಂಡಿದೆ. ಭಾರತ್ ಮಾಲ್ ನ ಭಾರತ್ ಸಿನೆಮಾಸ್ ನಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ದೀಪ ಬೆಳಗಿಸುವ ಮೂಲಕ ಸಿನೆಮಾ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಚಿತ್ರಕ್ಕೆ ಶುಭ ಹಾರೈಸಿ, ಧರ್ಮದೈವ ಚಿತ್ರದಂತೆ ಈ ಚಿತ್ರವೂ ಜನಮಾನಸ ಮುಟ್ಟಲಿ ಎಂದರು.
ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ನಾಟಕಕಾರ, ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ, ತುಳು ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಆರ್. ಧನರಾಜ್, ಕ್ಯಾಟ್ಕಾ ಅಧ್ಯಕ್ಷ ಲಂಚುಲಾಲ್, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರನಾಥ್ ಗಟ್ಟಿ, ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಕ್ಯಾಟ್ಕಾದ ಮಾಜಿ ಅಧ್ಯಕ್ಷ ಮೋಹನ್ ಕೊಪ್ಪಲ, ನಟ ರೂಪೇಶ್ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಸ್ವರಾಜ್ ಶೆಟ್ಟಿ, ಇಸ್ಮಾಯೀಲ್ ಮೂಡುಶೆಡ್ಡೆ, ತಮ್ಮ ಲಕ್ಷ್ಮಣ್, ಚಂದ್ರಹಾಸ್ ಆಳ್ವ ನಿರ್ಮಾಪಕ ನಡುಬೈಲ್ ಜಗದೀಶ್ ಅಮೀನ್, ನಿರ್ದೇಶಕ ನಿತಿನ್ ರೈ ಕುಕ್ಕುವಳ್ಳಿ, ನಟ ರಮೇಶ್ ರೈ ಕುಕ್ಕುವಳ್ಳಿ ಮೊದಲಾದವರು ಉಪಸ್ಥಿತರಿದ್ದು, ಶುಭ ಹಾರೈಸಿದರು.