ತುಮಕೂರು: ಗುರುರೇಣುಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗಿರುವ “ಅಂತರ್ಯಾಮಿ" ಚಲನಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ವಸ್ತು ವಿಷಯವಾಗಿದ್ದು, ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣದ ಗೀಳಿಗೆ ಬಲಿಯಾಗುತ್ತಿರುವುದರ ಪರಿಣಾಮ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇಗೆ ಭಾರತದ ಭವಿಷ್ಯದ ಅಭಿವೃದ್ಧಿ ವ್ಯವಸ್ಥೆಗಳಿಗೆ ಮಾರಕವಾಗಿದೆ. ವಿದೇಶಗಳಿಗೆ ಹೇಗೆ ಪೂರಕವಾಗಿದೆ ಎಂಬುದರ ಜೊತೆಗೆ, ಯುವ ಜನತೆ ಜೊತೆಗೆ ಸಾಮಾನ್ಯ ಜನತೆ ಕೂಡ ಹೇಗೆ ಇದರ ಭಾಗವಾಗುತ್ತಿದ್ದಾರೆ. ಇದನ್ನು ನಾಯಕ ಹೇಗೆ ಸರಿ ಪಡಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸದ್ಯ ರಾಜ್ಯದ ಎಲ್ಲ ಕಡೆ ಸಂಚರಿಸಿ ಚಿತ್ರದ ಪ್ರಚಾರ ಕಾರ್ಯ ಕೈಗೊಂಡಿದ್ದೇವೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಚಿತ್ರತಂಡ ಚಿತ್ರಮಂದಿರಗಳಿಗೆ ಭೇಟಿ ನೀಡಲಿದೆ ಎಂದು ಚಿತ್ರದ ನಿರ್ದೇಶಕ ಕೆ.ಧನಂಜಯ ತಿಳಿಸಿದ್ದಾರೆ.
ಕೆ. ಧನಂಜಯ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದರೆ, ಗುರುರೇಣುಕಾ ಪ್ರೊಡಕ್ಷನ್ ಲಾಂಚನದಲ್ಲಿ ನವೀನ್ ಎನ್ ಜಿ ಬಂಡವಾಳ ಹೂಡಿದ್ದಾರೆ. ಛಾಯಗ್ರಾಹಣ ಬಾಲು, ಸಂಗೀತ ದೇಸಿ ಮೋಹನ್, ಸಾಹಿತ್ಯ -- ವಿನಯ್ ಕಾವ್ಯಕಾಂತಿ, ಸಂಕಲನ - ಅರವಿಂದ್ ರಾಜ್, ನೃತ್ಯ ನಿರ್ದೇಶನ- ಬಾಲ ಮಾಸ್ಟರ್ ಅವರದ್ದಾಗಿದೆ.
ನಾಯಕನಾಗಿ ಪ್ರಣವ್ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಮೋಹಿರ ಆಚಾರ್ಯ ( ಕನ್ನಡತಿ ಸೀರಿಯಲ್ ), ಮಂಡ್ಯ ಸಿದ್ದು, ಕಾಮಿಡಿ ಖಿಲಾಡಿ ಉದಯ್, ಕಿಟ್ಟಿ, ಮಂಜಿವಾ, ಮುಗಿಲನ್, ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಾ ಮಾಲಿನಿ, ರೇಣುಕಾ, ರುದ್ರ ಮುನಿ, ಯೋಗಿಶ್ ಮುಂತಾದವರು ಪಾತ್ರವರ್ಗದಲ್ಲಿದ್ದಾರೆ.