image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ನಡೆದ ಎಮ್ ಎನ್ ರಾಜೇಂದ್ರ ಕುಮಾರ್ ಅದ್ದೂರಿ ನಿರ್ಮಾಣದ 'ಡಾಕ್ಟ್ರಾ?? ಭಟ್ರಾ?' ತುಳು ಸಿನಿಮಾ ಮುಹೂರ್ತ

ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ನಡೆದ ಎಮ್ ಎನ್ ರಾಜೇಂದ್ರ ಕುಮಾರ್ ಅದ್ದೂರಿ ನಿರ್ಮಾಣದ 'ಡಾಕ್ಟ್ರಾ?? ಭಟ್ರಾ?' ತುಳು ಸಿನಿಮಾ ಮುಹೂರ್ತ

ಮಂಗಳೂರು:   ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯ ಅಡಿಯಲ್ಲಿ ಡಾ. ಎಮ್ ಎನ್ ರಾಜೇಂದ್ರ ಕುಮಾರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ತುಳು ಚಲನಚಿತ್ರ 'ಡಾಕ್ಟ್ರಾ?? ಭಟ್ರಾ?' ದ ಮುಹೂರ್ತ ಸಮಾರಂಭ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಜರಗಿತು.

ನಂತರ ಮಾತಾನಾಡಿದ ನಿರ್ಮಾಪಕ ಡಾ. ರಾಜೇಂದ್ರ ಕುಮಾರ್, ನಮ್ಮ ಸಂಸ್ಥೆ 2009ರಲ್ಲಿ  ಆರಂಭಗೊಂಡು "ಜೋಗುಳ" ಎಂಬ ಮೆಗಾ ಧಾರಾವಾಹಿಯನ್ನು ಕಿರುತೆರೆಗೆ ಅರ್ಪಿಸಿದೆ. ವಿನು ಬಳಂಜ ಅವರ ನಿರ್ದೇಶನದಲ್ಲಿ ಸುಮಾರು 600 ಕಂತುಗಳಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿರುವ ಈ ಧಾರಾವಾಹಿಯು ಜನಮೆಚ್ಚುಗೆಯನ್ನು ಪಡೆದಿರುತ್ತದೆ. ಹಾಗೆಯೇ  ಪ್ರತಿಭಾವಂತ ನಿರ್ದೇಶಕ ಎಂ.ಡಿ. ಶ್ರೀಧರ್ ಅವರ ನಿರ್ದೇಶನದಲ್ಲಿ "ಗಲಾಟೆ" ಎಂಬ ಸಿನಿಮಾ ಪ್ರಜ್ವಲ್‌ ದೇವರಾಜ್ ಹಾಗೂ ಬಹುತಾರಾಗಣದಲ್ಲಿ ನಿರ್ಮಾಣವಾಗಿರುವುದು ಎಂ.ಎನ್.ಆ‌ರ್. ಪ್ರೊಡಕ್ಷನ್ ಸಂಸ್ಥೆಯ ಮೊದಲ ಚಲನಚಿತ್ರವಾಗಿರುತ್ತದೆ.

ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆ ತುಳುನಾಡಿನ ಸಂಸ್ಥೆಯಾಗಿರುವುದರಿಂದ ತುಳುಭಾಷೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೀಗ ಎರಡನೇ ಸಿನಿಮಾವನ್ನು ತುಳುಭಾಷೆಯಲ್ಲಿ ನಿರ್ಮಿಸಲು ಉತ್ಸುಕವಾಗಿದೆ.  ನಿರ್ದೇಶಕರಾದ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರ ಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲಿ "ಡಾಕ್ಟ್ರಾ-ಭಟ್ರಾ?" ಎನ್ನುವ ತುಳು ಸಿನಿಮಾ ನಿರ್ಮಾಣವಾಗಲಿದೆ. 

 ಇದೊಂದು ವಿಭಿನ್ನ ಕಥಾಹಂದರವನ್ನು ಹೊಂದಿದ್ದು, ವಿಜ್ಞಾನ ಮತ್ತು ಆಚಾರ-ವಿಚಾರಗಳ ಸಂಘರ್ಷದಲ್ಲಿ ಕಥೆ ಹೆಣೆಯಲ್ಪಟ್ಟಿರುತ್ತದೆ. ಉತ್ತಮ ಸಂದೇಶದೊಂದಿಗೆ ಸಂಪೂರ್ಣ ಮನೋರಂಜನಾತ್ಮಕ ಚಿತ್ರ ಇದಾಗಿದ್ದು, ತುಳು ಚಿತ್ರರಂಗ ಮತ್ತು ತುಳು ರಂಗಭೂಮಿಯ ಜನಪ್ರಿಯ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಈ ಚಿತ್ರಕ್ಕೆ ಸಂಗೀತದ ಸಾರಥ್ಯ ವಹಿಸಲಿದ್ದಾರೆ.

ಈ ಚಲನಚಿತ್ರದ ನಿರ್ಮಾಣ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರೇಮ್ ಶೆಟ್ಟಿ ಫಿಲ್ಮ್ ನ ಪ್ರೇಮ್ ಶೆಟ್ಟಿ ಸುರತ್ಕಲ್ ಮತ್ತು ಉದ್ಯಮಿ ಜಯಪ್ರಕಾಶ್ ತುಂಬೆ ಅವರು ವಹಿಸಲಿದ್ದಾರೆ. ಈ ಚಲನಚಿತ್ರ ಸಂಪೂರ್ಣ ಹಾಸ್ಯಮಯವಾಗಿದ್ದು, ಕುಟುಂಬ ಸಮೇತರಾಗಿ ವೀಕ್ಷಿಸುವ ಚಿತ್ರವಾಗಿ ಮೂಡಿಬರಲಿದೆ.

ಆದುದರಿಂದ ಈ ಸಿನಿಮಾಕ್ಕೆ ತಮ್ಮೆಲ್ಲರ ಹೆಚ್ಚಿನ ಪ್ರೋತ್ಸಾಹ ಬೆಂಬಲ ದೊರೆತಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೆಯ ಚಲನಚಿತ್ರವನ್ನು ಎಂ.ಎನ್.ಆರ್. ಪ್ರೊಡಕ್ಷನ್ ಸಂಸ್ಥೆಯಿಂದ ನೀಡಲಿದ್ದೇವೆ. ನಮ್ಮ ಸಂಸ್ಥೆಗೆ ತಮ್ಮೆಲ್ಲರ ಸಂಪೂರ್ಣ ಪ್ರೋತ್ಸಾಹ ಇರಲಿ ಎಂದು ಆಶಿಸುತ್ತೇನೆ ಎಂದರು.

ಸಮಾರಂಭದಲ್ಲಿ ಶಾಸಕ ವೇದವ್ಯಾಸ್ ಕಾಮತ್, ಎ ಜೆ ಶೆಟ್ಟಿ, ಅರುಣಾ ರಾಜೇಂದ್ರ ಕುಮಾರ್, ಮೇಘರಾಜ ಜೈನ್ ದೇವದಾಸ್ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ ನವೀನ್ ಡಿ ಪಡೀಲ್, ಪುಷ್ಪರಾಜ್ ಜೈನ್, ವಿನಯ್ ಕುಮಾರ್ ಸೂರಿಂಜೆ, ಸದಾಶಿವ ಉಲ್ಲಾಳ್, ಶಶಿಕುಮಾರ್ ರೈ ಬಾಲ್ಯೊಟ್ಟು ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ