image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

Vaibhav Flix ಯೂಟ್ಯೂಬ್ ಚಾನೆಲ್ ನಲ್ಲಿ ಫ್ರೀಯಾಗಿ ಮಿಡಲ್ ಕ್ಲಾಸ್ ಫ್ಯಾಮಿಲಿ ಸಿನಿಮಾ ನೋಡುವ ಅವಕಾಶ.. !

Vaibhav Flix ಯೂಟ್ಯೂಬ್ ಚಾನೆಲ್ ನಲ್ಲಿ ಫ್ರೀಯಾಗಿ ಮಿಡಲ್ ಕ್ಲಾಸ್ ಫ್ಯಾಮಿಲಿ ಸಿನಿಮಾ ನೋಡುವ ಅವಕಾಶ.. !

ಮಂಗಳೂರು:  ಇದೇ ವರ್ಷ  ಜನವರಿಯಲ್ಲಿ ತುಳುನಾಡಿನಾದ್ಯಂತ ಅದ್ದೂರಿ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ 160 ದಿನಕ್ಕೂ ಹೆಚ್ಚು ಪ್ರದರ್ಶನಗೊಂಡಿದ್ದ  "ಮಿಡಲ್ ಕ್ಲಾಸ್ ಫ್ಯಾಮಿಲಿ"  ತುಳುನಾಡಿನ ಚಿತ್ರಾಭಿಮಾನಿಗಳ ಮನಸ್ಸು ಮುಟ್ಟುವಲ್ಲಿ ಯಶಸ್ವಿಯಾಗಿದೆ. ತದನಂತರ ಅದೆಷ್ಟೋ ಊರುಗಳಿಂದ ರಾಜ್ಯಗಳಿಂದ ದೇಶಗಳಿಂದ. ಸಿನಿಮಾ ನೋಡುವ ಇಚ್ಛೆಯನ್ನು ವೀಕ್ಷಕರು ನಮ್ಮಲ್ಲಿ ತಿಳಿಸಿದ್ದು ವೀಕ್ಷಕರ ಕೋರಿಕೆಯಂತೆ ವಿಶ್ವದಾದ್ಯಂತ ಇರುವ ತುಳು ಚಿತ್ರಾಭಿಮಾನಿಗಳ ಮನೆ ಮನೆಗೆ ತಲುಪಲು ನಾವು ನಮ್ಮ ಮಿಡಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾವನ್ನು ನಮ್ಮ ಸಂಸ್ಥೆಯ ಅಧಿಕೃತ ಯೂಟ್ಯೂಬ್ ಚಾನೆಲ್ Vaibhav Flix ಮೂಲಕ ಉಚಿತವಾಗಿ ಪ್ರಸಾರ ಮಾಡಲು ನಿರ್ಧರಿಸಿರುತ್ತೇವೆ. ಅಕ್ಟೋಬರ್ 25 ಶನಿವಾರದಿಂದ ಈ ಸಿನಿಮಾ ಜನರಿಗೆ ನೋಡಲು ಲಭ್ಯವಿರುತ್ತದೆ ಎಂದು ಪ ನಿರ್ಮಾಪಕರು ಆನಂದ್ ಎನ್.ಕುಂಪಲ ತಿಳಿಸಿದ್ದಾರೆ. ಈ ಚಿತ್ರವನ್ನು ರಾಹುಲ್ ಅಮೀನ್ ನಿರ್ದೇಶನ ಮಾಡಿರದ್ದು. ರೋಹನ್ ಕಾರ್ಪೋರೇಷನ್ ಅರ್ಪಿಸುವ ವೈಭವ್ ಫಿಕ್ಸ್ ಮತ್ತು ಮ್ಯಾಂಗೋ ಪಿಕಲ್ ಎಂಟರ್ಟೈನ್ಮಂಟ್ ಪ್ರೊಡಕ್ಷನ್, ಎಚ್ ಪಿ ಆರ್ ಫಿಲಂಸ್ ಹರಿಪ್ರಸಾದ್ ರೈ ಯವರ ಸಹಯೋಗದಲ್ಲಿ ಆನಂದ್ ಎನ್ ಕುಂಪಲ ನಿರ್ಮಾಣ ಮಾಡಿದ್ದಾರೆ. ವಿನಿತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿ ಅರವಿಂದ ಬೋಳಾ‌ರ್, ಭೋಜರಾಜ್ ವಾಮಂಜೂರು, ನವೀನ್ ಡಿ ಪಡೀಲ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ರವಿ ರಾಮ ಕುಂಜ, ಕದ್ರಿ ನವನೀತ್ ಶೆಟ್ಟಿ, ಸಾಹಿಲ್ ರೈ, ಮೈಮ್ ರಾಮ್ ದಾಸ್, ರೂಪಾ ವರ್ಕಾಡಿ, ಚೈತ್ರ ಶೆಟ್ಟಿ, ಗಿರೀಶ್ ನಾರಾಯಣ್ ಅಭಿನಯಿಸಿದ್ದಾರೆ

Category
ಕರಾವಳಿ ತರಂಗಿಣಿ