ಬೆಂಗಳೂರು : ನಮ್ಮನ್ನು ಭೂಮಿಗೆ ತಂದ ತಂದೆಗೆ ಸಲ್ಲಿಸಬಹುದಾದ ಕೃತಜ್ಞತೆಯ ಸಹಸ್ರನಾಮವಳಿಯೇ "ಥ್ಯಾಂಕ್ಸ್ ಅಪ್ಪ" ಕಾದಂಬರಿ. ನಿರ್ಮಾಪಕ - ನಿರ್ದೇಶಕ ವೀರೇಂದ್ರ ಬಾಬು ನಂಜೇಗೌಡ ಅವರು ಬರೆದಿರುವ "ಥ್ಯಾಂಕ್ಸ್ ಅಪ್ಪ" ಪುಸ್ತಕವನ್ನು ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್ ನಲ್ಲಿ ಡಾ. ಸಂತೋಷ್ ಹೆಗಡೆ* ಇತ್ತೀಚೆಗೆ ಲೋಕಾರ್ಪಣೆ ಮಾಡಿದರು. ಜಿ.ಎಸ್.ಟಿ. ಜಂಟಿ ಆಯುಕ್ತರಾದ ಡಾ|| ಸಂಗಮೇಶ್ ಉಪಾಸೆ, ಮಾಜಿ ಶಾಸಕರಾದ ಶ್ರೀ ನೆ.ಲ.ನರೇಂದ್ರಬಾಬು, ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರು, ಶ್ರೀ ಎಸ್. ಇ. ಸುಧೀಂದ್ರ, AICCಯ ನಾಷನಲ್ ಕಮಿಟಿ ಸದಸ್ಯರು ಕರ್ನಾಟಕ ಉಸ್ತುವಾರಿ ವಹಿಸಿರುವ ಶ್ರೀ ಸುಜೇಂದ್ರ ಶೆಟ್ಟಿ, ಕೆ.ಪಿ.ಸಿ.ಸಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷರು ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ, ವಕೀಲರಾದ ಬಿ.ಎಸ್. ಸಂತೋಷ್, ಬಿ.ವಿ. ಮಾಧವಮೂರ್ತಿ, ಪೋಲಿಸ್ ಇನ್ಸಪೆಕ್ಟರ್ ಜಗದೀಶ್ ರವರು ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಲೇಖಕರಾದ ವೀರೇಂದ್ರಬಾಬು ಅವರ ತಂದೆ ನಂಜೇಗೌಡ ಅವರು "ಥ್ಯಾಂಕ್ಸ್ ಅಪ್ಪ" ಕಾದಂಬರಿ ಬಿಡುಗಡೆಗೆ ಸಾಕ್ಷಿಯಾದರು.
ಡಾ. ಸಂತೋಷ್ ಹೆಗಡೆ ಯವರು ಮಾತನಾಡಿ "ಥ್ಯಾಂಕ್ಸ್ ಅಪ್ಪ" ಕಾದಂಬರಿ ನಾಡಿನ ಪ್ರತಿ ಮನೆಯಲ್ಲು ಇರಬೇಕಾದ ಪುಸ್ತಕ ಎನ್ನುವುದು ನನ್ನ ಅನಿಸಿಕೆ. Screen ಮೇಲೆ ಪ್ರದರ್ಶಿಸಿದ Promo ದಲ್ಲಿ ಮಗಳು ಮದುವೆಯಾಗಿ ಗಂಡನ ಮನೆಗೆ ಹೋಗುವಾಗ "ಥ್ಯಾಂಕ್ಸ್ ಅಪ್ಪ" ಕಾದಂಬರಿಯನ್ನು ಉಡುಗೊರೆಯಾಗಿ ಪಡೆದ ದೃಶ್ಯದಂತೆ ಇವತ್ತಿನ ಪೀಳಿಗೆಗೆ ಅಪ್ಪನ ಮಹತ್ವ ತಿಳಿಸಲು ಈ ಪುಸ್ತಕವನ್ನು ಉಡುಗೊರೆಯಾಗಿ ನೀಡುವ ಸಂಪ್ರದಾಯವನ್ನು ರೂಡಿಸಿಕೊಳ್ಳಬೇಕು ಎಂದು ಲೇಖಕರಾದ ವೀರೇಂದ್ರಬಾಬು ನಂಜೇಗೌಡ ರವರಿಗೆ ಹಾರೈಸಿದರು.
ಸ್ವತಃ ಲೇಖಕರಾದ ಡಾ|| ಸಂಗಮೇಶ್ ಉಪಾಸೆ ಯವರು ಮತನಾಡಿ ವೀರೇಂದ್ರಬಾಬು ನಂಜೇಗೌಡ ರವರು ಏನೇ ಮಾಡಿದರು ವಿಭಿನ್ನವಾಗಿ ಮಾಡುವವರು. ಸಿನಿಮೆಯ ರೀತಿಯಲ್ಲಿ ಕನ್ನಡದ ಕೃತಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು "ಥ್ಯಾಂಕ್ಸ್ ಅಪ್ಪ" ಕಾದಂಬರಿಯಲ್ಲಿ ಲೇಖಕರು 92 ಅಧ್ಯಯಗಳನ್ನು ಬರೆದಿದ್ದಾರೆ. ಇದರಲ್ಲಿ ಕಾದಂಬರಿ ಪ್ರಕಾರದಲ್ಲಿನ ಜನಪ್ರಿಯ ಶೈಲಿಯ ತಂತ್ರವನ್ನು ತನ್ನ ನಿರೂಪಣೆಯಲ್ಲಿ ಕಟ್ಟಿ ಕೊಟ್ಟಿದ್ದಾರೆ. ಕನ್ನಂಬಾಡಿ ಅಣೆಕಟ್ಟು ಕಟ್ಟುವಾಗ ಅಲ್ಲಿದ್ದ 19 ಸಾವಿರ ಹಳ್ಳಿಗರು KRS Dam ಗಾಗಿ ಹಳ್ಳಿಯನ್ನು ತೊರೆದು, ತ್ಯಾಗ ಮಾಡುವ ಹಿನ್ನಲೆಯಲ್ಲಿ ಈ ಕಾದಂಬರಿ ತೆರೆದುಕೊಳ್ಳುತ್ತದೆ. ಕೊನೆಯ ಅಧ್ಯಾಯ ಓದುವಾಗ ಅದು ಲೇಖಕರ ಮಾತಾಗದೆ ನಮ್ಮೆಲ್ಲರ ಬಾವೋದ್ರೇಕವನ್ನ ಉದ್ದೀಪನಗೊಳಿಸಿ ಕಣ್ಣು ತೇವಗೊಳಿಸುವುದಂತು ನಿಜ. ಈ ಕಾರ್ಯಕ್ರಮದಲ್ಲಿ ಲೇಖಕರಾದ ವೀರೇಂದ್ರಬಾಬು ರವರ ತಂದೆ ನಂಜೇಗೌಡ ರವರು ಸಾಕ್ಷಿಯಾಗುವುದರಿಂದ ಇದೊಂದು ಅರ್ಥಪೂರ್ಣ ಸಂದರ್ಭ ಈ ಕಾರ್ಯಕ್ರಮದ ಮೂಲಕ ಜಗತ್ತಿನ ಎಲ್ಲಾ ತಂದೆಯರಿಗೆ ಥ್ಯಾಂಕ್ಸ್ ಹೇಳುತ್ತೇನೆ ಎಂದು ಪುಸ್ತಕದ ಕುರಿತು ಆಶಯ ನುಡಿಯನ್ನು ಆಡಿದರು.
ಚಲನಚಿತ್ರ ಕಿರುತೆರೆ ನಟರು, ಶಾಸಕರಾದ ಶ್ರೀ ನೆ.ಲ. ನರೇಂದ್ರಬಾಬು ರವರು ಮಾತಾಡಿ ಈ ಕಾದಂಬರಿಯ ಒಂದಿಷ್ಟು ಪುಟಗಳನ್ನು ಓದುವಾಗ ನನ್ನ ತಂದೆಯ ನೆನಪು ಕಾಡಿಸಲು ಶುರುವಾಯಿತು. ವೀರೇಂದ್ರಬಾಬು ರವರ "ಥ್ಯಾಂಕ್ಸ್ ಅಪ್ಪ" ನಮ್ಮ ಅಪ್ಪನನ್ನು ನೆನೆಯುವಂತೆ ಮಾಡುವುದೆ ಈ ಪುಸ್ತಕದ ಸಾರ್ಥಕತೆ ಎಂದು ಭಾವುಕರಾದರು. ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಎಸ್. ಇ. ಸುಧೀಂದ್ರ ರವರು ಕುಟುಂಬ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಸಾರುವ ಈ ಪುಸ್ತಕ "ಭಾವ ಭಗವದ್ಗೀತೆ" ಎಂದು ಶ್ಲಾಘಿಸಿದರು. ಕೆ.ಪಿ.ಸಿ.ಸಿ ಇತರೆ ಹಿಂದುಳಿದ ವರ್ಗಗಳ ವಿಭಾಗ ಉಪಾಧ್ಯಕ್ಷರು ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ ಯವರು ಅಪ್ಪನ ಹಾಡು ಹಾಡಿ ವೀಕ್ಷಕರ ಗಮನ ಸೆಳೆದರು.
ಅತಿಥಿ ಗಣ್ಯರು ಶುಭ ನುಡಿಗಳ ನಂತರ ಬೆಂಗಳೂರು ಲಾ ಹೌಸ್ 2026ನೇ ಸಾಲಿನ ಶ್ರೇಷ್ಠ ಗೌರವ ಪುರಸ್ಕಾರ* ವನ್ನು ಹೆಮ್ಮೆಯಿಂದ ನೀಡಿತು. ಶ್ರೀ ಸಂತೋಷ್ಹೆಗಡೆಯವರಿಗೆ ನ್ಯಾಯ ಶ್ರೇಷ್ಠ ಗೌರವ ಪುರಸ್ಕಾರ, ಡಾ|| ಸಂಗಮೇಶ್ ಉಪಾಸೆ, ಬಿ.ಎಸ್. ಸಂತೋಷ್, ಬಿ.ವಿ. ಮಾಧವಮೂರ್ತಿ "ವೃತ್ತಿ ಶ್ರೇಷ್ಠ," ಪಂಡಿತ್ ಅರುಣ್ ರಾಟೆಯವರಿಗೆ "ಗುರು ಶ್ರೇಷ್ಠೆ ಶ್ರೀ ಎಸ್.ಇ. ಸುಧೀಂದ್ರ, ಶ್ರೀಮತಿ ಪವಿತ್ರಾ ಆರ್ ಪ್ರಭಾಕರ್ ರೆಡ್ಡಿ ರವರಿಗೆ "ಜನ ಶ್ರೇಷ್ಠ" ಶ್ರೀ ನರೇಂದ್ರಬಾಬುರವರಿಗೆ "ಸೇವಾ ಶ್ರೇಷ್ಠ" ಗೌರವ ಪುರಸ್ಕಾರವನ್ನು ನೀಡಿ ಗೌರವಿಸಿದರು. ಇದೇ ಸಂತಸದಲ್ಲಿ ವೀರೇಂದ್ರಬಾಬು ನಂಜೇಗೌಡರವರು, ಪುಸ್ತಕಕ್ಕೆ ಮುನ್ನಡಿ ಬರೆದ ಇತಿಹಾಸ ತಜ್ಞರಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್ ರವರು ಹಾಗೇ ಪುಸ್ತಕಕ್ಕೆ ಬೆನ್ನುಡಿ ಬರೆದು ಬೆನ್ನು ತಟ್ಟಿ ಆಶಿರ್ವದಿಸಿದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು.
ಪುಸ್ತಕದ ಹಲವಾರು ಹಂತಗಳಲ್ಲಿ ಸಹಕರಿಸಿದ ಚಲನಚಿತ್ರ ನಿರ್ದೇಶಕಾರದ *ಶ್ರೀ ರಾಮ್ ಜನಾರ್ಧನ್* ಹಾಗೂ ತನ್ನ ಕನಸಿಗೆ ಅಕ್ಷರ ರೂಪ ಕೊಟ್ಟ ಚಲನಚಿತ್ರ ಸಾಹಿತಿ-ಸಂಗೀತ ನಿರ್ದೇಶಕರಾದ ಶ್ರೀ ಕೆ. ಎಮ್ ಇಂದ್ರ ರವರನ್ನು ವೇದಿಕೆಯಲ್ಲಿ ಸನ್ಮಾಸಿಲಾಯಿತು. ಕಾರ್ಯಕ್ರಮವನ್ನು ಹೃದಯಸ್ಪರ್ಶಿಯಾಗಿ ನಿರೂಪಿಸಿದ ಅಂತರಾಷ್ಟ್ರೀಯ ನಿರೂಪಕರಾದ *ಶ್ರೀ ಶಂಕರ್ ಪ್ರಕಾಶ್* ರವರು ಭಾವುಕರಾಗಿ ತಮ್ಮ ತಂದೆಯನ್ನು ನೆನೆದು ತನಗೆ ಕಂಚಿನ ಕಂಠ ಎಂದು ಕರೆಯುವುದರ ಹಿಂದೆ ತನ್ನ ತಂದೆಯ ಬಳುವಳಿ ಇದೆ. ಎಂದು ಗದ್ಗಿದಿತರಾದರು.
"ಥ್ಯಾಂಕ್ಸ್ ಅಪ್ಪ" ಕಾದಂಬರಿಯನ್ನು "ಬೆಂಗಳೂರು ಲಾ ಹೌಸ್" ಪಬ್ಲಿಕೇಷನ್ ಹೊರ ತರುತ್ತಿದ್ದು. ವಿಶೇಷವಾಗಿ 8217215195 whatsapp ನಂಬರ್ ಗೆ "ಹಾಯ್" ಎಂದು ಮೆಸೇಜ್ ಮಾಡುವ ಮೂಲಕ "ಥ್ಯಾಂಕ್ಸ್ ಅಪ್ಪ" ಕಾದಂಬರಿ ಖರೀದಿಸಿದರೆ, ನಿಮ್ಮ ಮನೆಯ ವಿಳಾಸಕ್ಕೆ ಪುಸ್ತಕವನ್ನು ತಲುಪಿಸಲಾಗುವುದೆಂದು ಹೇಳಿದರು.