ಮಂಗಳೂರು: 'ಒಳ್ಳೆಯ ಉದ್ದೇಶಕ್ಕಾಗಿ ಒಂದುಗೂಡೋಣ'ಎನ್ನುವ ಧೈಯ ದೊಂದಿಗೆ ರೋಟರಿ ಮಂಗಳೂರು ಸೆಂಟ್ರಲ್ ಕ್ಲಬ್ ನ 2025-26 ಪದಾಧಿಕಾರಿಗಳು ಮುನ್ನಡೆಯುತ್ತಿರುವುದು ಸಕಾಲಿಕವಾದ ಚಿಂತನೆಯಾಗಿದೆ. ಅದು ಈ ದೇಶದ ಪರಂಪರೆಯ ಭಾಗವಾಗಿದೆ ಎಂದು ಡಾ.ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ತಿಳಿಸಿದ್ದಾರೆ.ಅವರು ನಗರದ ಬಲ್ಮಠದಲ್ಲಿರುವ ಹೋಟೆಲ್ ಕುಡ್ಲಾ ಪೆವಿಲಿಯನ್‌ನಲ್ಲಿ ಶುಕ್ರವಾರ ರೋಟರಿ ಮಂಗಳೂರು ಸೆಂಟ್ರಲ್ ಕ್ಲಬ್ (ವಲಯ 2,ಆರ್ ಐಡಿ 3181) 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡಿ, ನಮ್ಮ ದೇಶದಲ್ಲಿ ಸಹಸ್ರಾರು, ದೇವ ಮಂದಿರಗಳು, ಸಾವಿರಾರು ಮಸೀದಿಗಳು,ಕೈಸ್ತರ ಚರ್ಚ್ ಗಳು ಸೇರಿದಂತೆ ವಿವಿಧ ಧರ್ಮ ಗಳ ಜನರ ಆರಾಧನಾ ಪರಂಪರೆ ನಡೆದುಕೊಂಡು ಬಂದಿದೆ. ಅವರೆಲ್ಲರೂ ಸೇರಿ ಈ ದೇಶದಲ್ಲಿ ಜೊತೆಯಾಗಿ ಬದುಕುತ್ತಿರುವ ಸಾಮರಸ್ಯ ಇದೆ.ಇದು ದೇಶದ ಪುರಾತನ ಪರಂಪರೆ. ಈ ಪರಂಪರೆ ಉಳಿಯ ಬೇಕಾದರೆ ಸದುದ್ದೇಶಕ್ಕಾಗಿ ನಾವು ಜೊತೆಯಾಗಿ ಸಾಗಬೇಕಾದ ಅಗತ್ಯವಿದೆ ಎಂದು ಡಾ.ಮೋಹನ್ ಆಳ್ವ ತಿಳಿಸುತ್ತಾ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ 2025-26 ಸಾಲಿನ ಅಧ್ಯಕ್ಷ ಭಾಸ್ಕರ ರೈ ಕಟ್ಟ ಹಾಗೂ ಕಾರ್ಯದರ್ಶಿ ಯಾಗಿ ವಿಕಾಸ್ ಕೋಟ್ಯಾನ್ ಅಧಿಕಾರ ಸ್ವೀಕರಿಸಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ರೋಟರಿ ಜಿಲ್ಲೆ 3181 ಚೆನ್ನಗಿರಿ ಗೌಡ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರಮಾಣ ವಚನ ಬೋಧಿಸಿದರು.
ನಿರ್ಗಮನ ಅಧ್ಯಕ್ಷ ಬ್ರಿಯಾನ್ ಪಿಂಟೊ ಸ್ವಾಗತಿಸಿ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರ ಮಾಡಿ ಶುಭಹಾರೈಸಿದರು.ಗೌರವ ಅತಿಥಿಯಾಗಿ ವಲಯ ಲೆಫ್ಟಿನೆಂಟ್ ರವಿ ಜಲನ್, ಮಾಜಿ ಅಧ್ಯಕ್ಷ ರಾಜೇಶ್ ಶೆಟ್ಟಿ, ಕ್ಲಬ್ ಸ್ಥಾಪಕ ಸದಸ್ಯ ಸತೀಶ್ ಪೈ ಮೊದಲಾದ ವರು ಉಪಸ್ಥಿತರಿದ್ದರು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವಕಾರ ಮಾಡಿದ ಭಾಸ್ಕರ್ ರೈ ಕಟ್ಟ ಸರ್ವರ ಸಹಕಾರವನ್ನು ಕೋರಿದರು. ನೂತನ ಕಾರ್ಯದರ್ಶಿವಿಕಾಸ್ ಕೊಟ್ಯಾನ್ ವಂದಿಸಿದರು. ಕೆ ಎಂ ಹೆಗ್ಡೆ ಮತ್ತು ಶೆಲ್ದಾನ್ ಕ್ರಾಸ್ತಾ ನಿರೂಪಿಸಿದರು. ನಿರ್ಗಮನ ಕಾರ್ಯದರ್ಶಿ ರಾಜೇಶ್ ಸೀತಾರಾಮ್ ಗತ ವರ್ಷದ ವರದಿ ವಾಚಿಸಿದರು.ನೂತನವಾಗಿ ಸೇರ್ಪಡೆ ಗೊಂಡ ರೋಟರಿಗೆ ಸದಸ್ಯರಿಗೆ ರೋಟರಿ ಮಾಜಿ ಗವರ್ನ ರ್ ಡಾ. ದೇವದಾಸ್ ರೈ ಪ್ರಮಾಣ ವಚನ ಬೋಧಿಸಿದರು. ರೋಟರಿ ಮಾಜಿ ಜಿಲ್ಲಾ ಗವರ್ನರ್ ಗಳಾದ ಕೃಷ್ಣ ಶೆಟ್ಟಿ, ರಂಗನಾಥ ಭಟ್, ವಿಕ್ರಮ್ ದತ್ತ ನಿಯೋಜಿತ ಗವರ್ನರ್ ಸತೀಶ್ ಬೊಳಾರ್ ಮೊದಲಾದವರು ಉಪಸ್ಥಿತರಿದ್ದರು.ಶ್ರೀದೇವಿ ಶಿಕ್ಷಣ ಸಂಸ್ಥೆ ಗಳ ಮುಖ್ಯಸ್ಥರೂ ಸಾಮಾಜಿಕ ಧುರೀಣ ರಾದ ಡಾ. ಎ ಸದಾನಂದ ಶೆಟ್ಟಿ ಯವರ ನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ದಾನಿಯೋರ್ವರು ನೀಡಿದ ಶಾಲಾ ಪುಸ್ತಕ ಗಳನ್ನು ಮಕಳಿಗೆ ವಿತರಿಸಲಾಯಿತು.