image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದ.ಕ. ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಅಭಿಯಾನಕ್ಕೆ ಮಾತ್ರ ಸೀಮಿತವಾಗದೆ ವ್ಯಾಪಕವಾಗಿ ನಡೆಯಬೇಕು : ಸಂಸದ ಬ್ರಿಜೇಶ್ ಚೌಟ

ದ.ಕ. ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಅಭಿಯಾನಕ್ಕೆ ಮಾತ್ರ ಸೀಮಿತವಾಗದೆ ವ್ಯಾಪಕವಾಗಿ ನಡೆಯಬೇಕು : ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಮಳೆ ಕೊಯ್ಲಿನ ಬಗ್ಗೆ ಜಾಗೃತಿಯೊಂದಿಗೆ ಜಿಲ್ಲೆಯಲ್ಲಿ ಪ್ರತಿ ಮನೆ ಮನೆಗಳಲ್ಲೂ ಜಲ ಸಂರಕ್ಷಣೆ ಯ ಬಗ್ಗೆ ಅಭಿಯಾನ ಜೊತೆಗೆ ಅನುಷ್ಠಾನ ನಡೆಸಬೇಕಾದ ಅಗತ್ಯವಿದೆ ಎಂದು ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಸಂಸದ ಬ್ರಿಜೇಶ್ ಚೌಟ ತಿಳಿಸಿದ್ದಾರೆ. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ನ ಸೇವಾ ಯೋಜನೆಯ ಅಂಗವಾಗಿ ಅರಿವು ಕೇಂದ್ರ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟ್ ಚಿಕ್ಕಮಗಳೂರು ಇದರ ವತಿಯಿಂದ ಶುಕ್ರವಾರ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ಮಂಗಳೂರು ಪ್ರೆಸ್ ಕ್ಲಬ್ ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತರ ಸಂಘದ ಸಹಯೋಗದೊಂದಿಗೆ ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡ ಮಳೆನೀರು ಕೊಯ್ದು ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲೂ ಜಲ ಸಾಕ್ಷರತೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಕೆಲಸಗಳಿಗೆ ಜಿಲ್ಲೆಯ ಎಲ್ಲಾ ವರ್ಗದ ಜನರ ಬೆಂಬಲವಿದೆ. ಕೇಂದ್ರ ಸರಕಾರದ ಸೌರ ಶಕ್ತಿ ಬಳಕೆಯ ಸೂರ್ಯ ಗರ್ ಸೌರಶಕ್ತಿ ಯೋಜನೆಯ ಪ್ರಯೋಜನವನ್ನು ಜನರು ಪಡೆದುಕೊಳ್ಳ ಬೇಕೆಂದು ಮನವಿ ಮಾಡಿದರು. ಸಮಾರಂಭದಲ್ಲಿ ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ ಅಧ್ಯಕ್ಷ ಭಾಸ್ಕರ ರೈ ಕಟ್ಟ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ, ಅರಿವು ಕೇಂದ್ರದ ನಿರ್ದೇಶಕ ಡಾ.ಯು. ಪಿ.ಶಿವಾನಂದ,ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟ್ ಚಿಕ್ಕಮಗಳೂರು ಇದರ ನಿರ್ದೇಶಕ ಮೈಕೆಲ್ ಬ್ಯಾಪ್ಟಿಸ್ಟ್,ರೈನ್ ಕ್ಯಾಚರ್ಸ್‌ ನಿರ್ದೇಶಕ ಮನೋಜ್ ಸ್ಯಾಮ್ಯುಯೆಲ್ ಬ್ಯಾಪ್ಟಿಸ್ಟ್, ರೇನ್‌ವಾಟರ್ ಹಾರ್ವೆಸ್ಟಿಂಗ್ ಪಾಲುದಾರ ಲಿನ್‌ಫೋರ್ಡ್ ಪಿಂಟೊ ,ರೋಟರಿ ಅಸಿಸ್ಟೆಂಟ್‌ ಗವರ್ನರ್ ಚೆನ್ನಗಿರಿ ಗೌಡ,ರೋಟರಿ ಕ್ಲಬ್‌ ಮಂಗಳೂರು ಸೆಂಟ್ರಲ್ ನ ಕಾರ್ಯದರ್ಶಿವಿಕಾಸ್ ಕೋಟ್ಯಾನ್‌,ಜಿಲ್ಲಾಧ್ಯಕ್ಷ ಪಬ್ಲಿಕ್ ಇಮೇಜ್ ಡಾ.ಶಿವಪ್ರಸಾದ್, ರೋಟರಿ ಕ್ಲಬ್ ಸಹಾಯಕ ಗವರ್ನರ್ ಚಿನ್ನ ಗಿರಿ ಗೌಡ, ರೋಟರಿ ಕ್ಲಬ್ ಸಹಾಯಕ ಗವರ್ನರ್ ಪ್ರೊ. ರವಿಶಂಕರ್ ರಾವ್, ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ದೇಶಕ ರಾಜೇಂದ್ರ ಕಲ್ಯಾವಿ, ರೋಟರಿ ಕ್ಲಬ್ ರೋನಲ್ ಲೆಫ್ಟಿನೆಂಟ್ ರವಿ ಜಲನ್, ಉಪಾಧ್ಯಕ್ಷ ರವೀಂದ್ರ ಬಿಎನ್, ಖಜಾಂಚಿ ರಾಜೇಶ್ ಸೀತಾರಾಮ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ನಿವೃತ್ತ ಸಿಬ್ಬಂದಿ ಚಂಚಲಾಕ್ಷಿ ಯವರಿಗೆ ರೋಟರಿ ಮಂಗಳೂರು ಸೆಂಟ್ರಲ್ ವತಿಯಿಂದ ಸನ್ಮಾನಿಸಲಾಯಿತು.

Category
ಕರಾವಳಿ ತರಂಗಿಣಿ