ಮಂಗಳೂರು: ಕರ್ನಾಟಕದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಂಗಳೂರಿನ ಹೆಸರಾಂತ ಉದ್ಯಮ ಸಂಸ್ಥೆ ರೋಹನ್ ಕಾರ್ಪೊರೇಷನ್ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಅವರು ಆಧಿಕೃತ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ ಮತ್ತು ಶೀಘ್ರದಲ್ಲೇ ಅವರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ ಎಂದು ರೋಹನ್ ಕಾರ್ಪೊರೇಷನ್ ನ ಸಂಸ್ಥಾಪಕರಾದ ಡಾ. ರೋಹನ್ ಮೊಂತೇರೊ ತಿಳಿಸಿದ್ದಾರೆ.
ಅವರು ನಗರದ ಬಿಜೈ ಭಾರತ್ ಮಾಲ್‌ನಲ್ಲಿ ಶನಿವಾರ ಹಮ್ಮಿಕೊಂಡ ಸಮಾರಂಭದಲ್ಲಿ ಅಧಿಕೃತವಾಗಿ ಘೋಷಿಸಿದ ಬಳಿಕ ಮಾತನಾಡುತ್ತಾ, "ಶಾರೂಖ್ ಖಾನ್ ಅವರಂತಹ ಪ್ರಭಾವಿ ವ್ಯಕ್ತಿತ್ವ ನಮ್ಮ ಜೊತೆಗೆ ಇರುವುದರಿಂದ, ನಮ್ಮ ಯಶಸ್ಸನ್ನು ಇನ್ನೂ ಎತ್ತರಕ್ಕೆ ವಿಸ್ತರಿಸುವಲ್ಲಿ ಹೊಸ ಆತ್ಮವಿಶ್ವಾಸ ಬಂದಿದೆ. ಇದು ಶಕ್ತಿಯುತ ಸಹಭಾಗಿತ್ವದ ಹೊಸ ಅಧ್ಯಾಯದ ಪ್ರಾರಂಭ” ಎಂದರು.
ಈ ಘೋಷಣೆ ವಿಶೇಷ ಏಕೆಂದರೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಶಾರೂಖ್ ಖಾನ್ ಅವರು ಬ್ರಾಂಡ್‌ಗೆ ಅಂಬಾಸಿಡರ್ ಆಗಿ ಒಪ್ಪಿಗೆ ನೀಡಿದ್ದಾರೆ. ಕಾರ್ಪೊರೇಷನ್ ಮತ್ತು ಶಾರೂಕ್ ಖಾನ್ ಅವರ ಈ ಮಹತ್ವದ ಹೆಜ್ಜೆ ಮಂಗಳೂರಿನ ಹೆಮ್ಮೆ ಮಾತ್ರವಲ್ಲ ಕರ್ನಾಟಕದ ಗರಿಮೆಯ ಪ್ರತಿಬಿಂಬವಾಗಿದೆ ಎಂದರು.
ಈ ಮೂಲಕ ರೋಹನ್ ಕಾರ್ಪೊರೇಷನ್ ಮಂಗಳೂರು ನಗರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಈ ಘೋಷಣೆ ಕೇವಲ ಬ್ರಾಂಡ್ ಪ್ರಚಾರವಲ್ಲ ಇದು ಮಂಗಳೂರಿನ ಅಭಿವೃದ್ಧಿಯ ಹಾದಿಯಲ್ಲಿ ಮತ್ತೊಂದು ಸಾಂದರ್ಭಿಕ ಹೆಜ್ಜೆ 32 ವರ್ಷಗಳ ಅನುಭವ, 5000ಕ್ಕೂ ಹೆಚ್ಚು ಸಂತುಷ್ಟ ಕುಟುಂಬಗಳು, ಮತ್ತು 25ಕ್ಕೂ ಹೆಚ್ಚು ಯಶಸ್ವಿ ಯೋಜನೆಗಳೊಂದಿಗೆ, ರೋಹನ್ ಕಾರ್ಪೊರೇಷನ್ ಇದೀಗ ಒಂದು ಜಾಗತಿಕ ಹಾದಿಗೆ ಕಾಲಿಟ್ಟಿದೆ. ರೋಹನ್ ಕಾರ್ಪೊರೇಷನ್ ಮತ್ತು ಶಾರೂಕ್ ಖಾನ್ ಅವರ ಈ ಮಹತ್ವದ ಹೆಜ್ಜೆ ಮಂಗಳೂರಿನ ಹೆಮ್ಮೆ ಮಾತ್ರವಲ್ಲ ಕರ್ನಾಟಕದ ಗರಿಮೆಯ ಪ್ರತಿಬಿಂಬವಾಗಿದೆ ಎಂದರು.
ಸಮಾರಂಭದ ಪ್ರಮುಖ ಆಕರ್ಷಣೆ ಎಂದರೆ, ಬೃಹತ್ ಪರದೆಯ ಮೇಲೆ ಪ್ರದರ್ಶಿಸಲಾದ ಅಧಿಕೃತ ಬ್ರಾಂಡ್ ಅಂಬಾಸಿಡರ್ ವಿಡಿಯೋ (AV). ಈ ವಿಡಿಯೋದಲ್ಲಿ ರೋಹನ್ ಕಾರ್ಪೊರೇಷನ್‌ನ ಸ್ಪೂರ್ತಿ ದಾಯಕ ಪಯಣ ಮತ್ತು ಶಾರೂಖ್ ಖಾನ್ ಅವರ ಶ್ರಮ ಮತ್ತು ವ್ಯಕ್ತಿತ್ವ ತುಂಬಿದ ಯಶೋಗಾಥೆ ಅದ್ಭುತವಾಗಿ ಪ್ರಸ್ತುತಗೊಂಡಿತ್ತು. ರೀನಾ ಡಿಸೋಜಾ ಅವರು ಕಾರ್ಯಕ್ರಮ ನಿರೂಪಿಸಿದರು.