image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬ್ಯಾಕ್ ಟು ಊರಿಗೆ 'ಬೊಲ್ಪು' ನ ಆಯೋಜನೆ

ಬ್ಯಾಕ್ ಟು ಊರಿಗೆ 'ಬೊಲ್ಪು' ನ ಆಯೋಜನೆ

ಮಂಗಳೂರು: ಮಂಗಳೂರಿನಿಂದ ಹೋಗಿ ವಿದೇಶಗಳಲ್ಲಿ ಯಶಸ್ಸು ಕಂಡಿರುವ ಉದ್ಯಮಿಗಳನ್ನು ಮತ್ತೆ ತಾಯ್ಕಾಡಿಗೆ ಬಂದು ಇಲ್ಲಿ ಕೊಡುಗೆ ನೀಡುವಲ್ಲಿ ಪ್ರೇರೇಪಿಸುವ ಜತೆಗೆ ಉದ್ಯಮಿಗಳ ಹುಮ್ಮಸ್ಸು ಪುನಶ್ಚತನಗೊಳಿಸುವ ವೇದಿಕೆಯಾಗಿ 'ಬೊಲ್ಲು' ಕಾರ್ಯ ನಿರ್ವಹಿಸಲಿದೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಅವರು ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ 'ಬೊಲ್ಲು' ಸಂಘಟನೆಗೆ ಚಾಲನೆ ನೀಡುವ ಸಮಾರಂಭದಲ್ಲಿ  ಮಾತನಾಡಿ, ಬೀಡಿ ಉದ್ಯಮವು ಕರಾವಳಿಯಲ್ಲಿ ಮಾಡಿದ ಕ್ರಾಂತಿ ಅದ್ಭುತವಾಗಿದೆ. ಅಲ್ಲಿಂದ ಗೋಡಂಬಿ ವಹಿವಾಟಿನವರೆಗೂ ಜಿಲ್ಲೆಯಲ್ಲಿ ಹಲವು ಯಶಸ್ವಿ ಉದ್ಯಮಿಗಳಿದ್ದಾರೆ. ಇದು ಸ್ಫೂರ್ತಿದಾಯಕ. ಈ ಸ್ಪೂರ್ತಿಯ ಯಶೋಗಾಥೆಗಳನ್ನು ಹೇಳುವಂತಾಗಬೇಕು. ಆ ಪರಿಕಲ್ಪನೆಯೊಂದಿಗೆ ಬೊಲ್ಪು ಕಾರ್ಯ ನಿರ್ವಹಿಸಲಿದೆ ಎಂದರು.ಇಸ್ರೇಲ್ ಭೇಟಿ ವೇಳೆ ಅಲ್ಲಿನ ರಾಯಭಾರಿಯವರನ್ನು ಭೇಟಿಯಾಗಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಸೀಮಿತ ಪ್ರಮಾಣದಲ್ಲಿರುವ ಕೃಷಿಭೂಮಿಯನ್ನು ಪರಿಣಾಮಕಾರಿಯಾಗಿ ಕೃಷಿಗೆ ಬಳಕೆ ಮಾಡುವುದಕ್ಕೆ ಇಸ್ರೇಲ್ ತಂತ್ರಜ್ಞಾನದ ಉಪಯೋಗದ ಬಗ್ಗೆ ಚರ್ಚಿಸಿದ್ದೇನೆ. ಮುಖ್ಯವಾಗಿ ಮಹಿಳೆಯರು ತಮ್ಮ ಸಣ್ಣ ಭೂಮಿಯಲ್ಲೂ ತರಕಾರಿ-ಹಣ್ಣು ಬೆಳೆಸಿ ರಫ್ತು ಮಾಡುವುದಕ್ಕೆ ಉತ್ತೆಜನ ನೀಡಬಹುದು, ಅಂತಹ ಕಾರ್ಯಕ್ಕೂ ಬೊಲ್ಪು ನೆರವಾಗಲಿದೆ. ಕೇವಲ ಕೆಟ್ಟಕಾರಣಗಳಿಗೆ ಮಂಗಳೂರು ಸುದ್ದಿಯಾಗುತ್ತಿರುವ ಮಂಗಳೂರು ಉದ್ಯಮಿಗಳ ಸ್ಫೂರ್ತಿದಾಯಕ ವಿಚಾರಗಳಿಂದ ಪ್ರಚಾರ ಪಡೆಯಬೇಕಿದೆ. ವರ್ಷಕ್ಕೆ ಕನಿಷ್ಟ 10ರಂತೆ ಮುಂದಿನ ಐದು ವರ್ಷಗಳಲ್ಲಿ ಸುಮಾರು 50 ರಷ್ಟು ಯಶೋಗಾಥೆಗಳನ್ನು ಪ್ರಪಂಚದ ಮುಂದೆ ತೆರೆದಿಡುವುದು ಈ ಬೊಲ್ಪುವಿನ ಪ್ರಮುಖ ಉದ್ದೇಶ ಎಂದವರು ಹೇಳಿದರು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಎಲ್ಲ ಸಂಪನ್ಮೂಲಗಳೂ ಇವೆ. ಯಾವುದೇ ಉದ್ಯಮಕ್ಕೆ ಇನ್ನಷ್ಟು ಅವಕಾಶ ಕಲ್ಪಿಸಿದರೆ ಅದು ಬಹಳ ದೊಡ್ಡದಾಗಿ ಬೆಳೆಯಬಹುದು. ಹೊಸ ಉದ್ಯಮಿಗಳಿಗೆ ಅವಕಾಶ ಕೊಟ್ಟರೆ ಜಿಲ್ಲೆ ಅಭಿವೃದ್ಧಿಯಾಗಬಹುದು ಎನ್ನುವ ದೂರದೃಷ್ಟಿಯನ್ನು ಯುವ ಸಂಸದ ಚೌಟ ಅವರು ಹೊಂದಿದ್ದಾರೆ, ಇದು ಉತ್ತಮ ಪರಿಕಲ್ಪನೆ ಎಂದು ಶ್ಲಾಘಿಸಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಗಣೇಶ್‌ ಕಾರ್ಣಿಕ್, ರೋಹಿತ್, ವತಿಕಾ ಪೈ, ಪರಣೀತ್‌ ರಾವ್‌ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭ ಮುಂಬೈ ಹಾಗೂ ವಿದೇಶದಲ್ಲಿ ಯಶಸ್ವಿಯಾಗಿ ಗುರುತಿಸಿಕೊಂಡಿರುವ ಮಂಗಳೂರು ಮೂಲದ ಉದ್ಯಮಿಗಳಾದ ಸುಬ್ರಹ್ಮಣ್ಯ ರಾವ್, ಪ್ರೀತಂ ಹೆಗ್ಡೆ, ಶ್ರೀವತ್ಸ ಪ್ರಭಾಕರ್, ಕಾಂಚನ, ಶ್ರೀಧರ್ ಮೊದಲಾದವರು ವೀಡಿಯೋ ಕಾನ್ಸರೆನ್ಸ್ ಮೂಲಕ ನೂತನ ಆವಿಷ್ಕಾರಕ್ಕೆ ಶುಭ ಹಾರೈಸಿ, ಬೆಂಬಲ ಸೂಚಿಸಿದರು.

Category
ಕರಾವಳಿ ತರಂಗಿಣಿ