ಮಂಗಳೂರು: ಕೋಣಾಜೆ ಗ್ರಾಮದ 11 ಎಕ್ರೆ 64 ಸೆಂಟ್ಸ್ ಜಮೀನಿನಲ್ಲಿ ರಚಿಸಿರುವ ಉದ್ದೇಶಿತ ವಸತಿ ಬಡಾವಣೆಯಲ್ಲಿ ವಾಸದ ನಿವೇಶನಗಳ ಹಂಚಿಕೆಗಾಗಿ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯೋಜನೆಯ ನಿವೇಶನಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 14 ರವರೆಗೆ ಅವಧಿ ವಿಸ್ತರಿಸಲಾಗಿದೆ. ಆಸಕ್ತಿಯುಳ್ಳವರು ಪ್ರಾಧಿಕಾರದ ಕಛೇರಿ ವೇಳೆಯಲ್ಲಿ ಬಂದು ಅರ್ಜಿ ಸ್ವೀಕರಿಸಬಹುದು ಮತ್ತು ನಿವೇಶನಗಳ ಬೆಲೆ ತಾತ್ಕಾಲಿಕವಾಗಿದ್ದು, ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.