image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಗರದ ಪ್ರಯೋಗಾಲಯಗಳಿಗೆ ಆರೋಗ್ಯ ಇಲಾಖೆ ಭೇಟಿ - ಪರಿಶೀಲನೆ

ನಗರದ ಪ್ರಯೋಗಾಲಯಗಳಿಗೆ ಆರೋಗ್ಯ ಇಲಾಖೆ ಭೇಟಿ - ಪರಿಶೀಲನೆ

ಮಂಗಳೂರು: ನಗರದ ವಿವಿದೆಡೆ ಕಾರ್ಯಾಚರಿಸುತ್ತಿದ್ದ ವ್ಯದ್ಯಕೀಯ ಪ್ರಯೋಗಾಲಯಗಳಿಗೆ ಅರೋಗ್ಯ ಇಲಾಖೆ ತಂಡ ಶನಿವಾರ ಭೇಟಿ ನೀಡಿ ಪರಿಶೀಲಿಸಿತು.ನಗರದ ಹಂಪನಕಟ್ಟೆ ಪರಿಸರದ ವಿವಿಧ ಪ್ರಯೋಗಾಲಯಗಳಿಗೆ ಭೇಟಿ ನೀಡಿದಾಗ ಅಲ್ಲಿನ ಲೈಸನ್ಸ್ ಅವಧಿ ಮುಕ್ತಾಯವಾಗಿ ಮತ್ತು ನಿಯಮಾನುಸಾರ ಕಾರ್ಯನಿರ್ವಾಹಿಸದಿರುವು ದು, ಬಯೋಮೆಡಿಕಲ್ ತ್ಯಾಜ್ಯವನ್ನು   ಸಮರ್ಪಕವಾಗಿ ನಿರ್ವಹಿಸದಿರುವ ಪ್ರಕರಣಗಳು ಕಂಡುಬಂದಿದ್ದು, ಇವುಗಳಿಗೆ ನೋಟೀಸ್ ನೀಡಲಾಗಿದೆ.

ದೇರಳಕಟ್ಟೆಯ ಪ್ರಯೋಗಾಲಯವೊಂದು ಯಾವುದೇ ದಾಖಲೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆಯೇ ನೋಟೀಸ್ ನೀಡಿ ಸೂಕ್ತ ಪರವಾನಿಗೆಗಳನ್ನು ಪಡೆಯಲು ಸೂಚಿಸಲಾಗಿತ್ತು.  ಆದರೂ ಯಾವುದೇ ಪರವಾನಿಗೆ ಇಲ್ಲದೆ ಮುಂದುವರಿದ್ದರಿಂದ ಈ ಪ್ರಯೋಗಾಲಯಕ್ಕೆ ಬೀಗಮುದ್ರೆ ಜಡಿಯಲಾಯಿತು.

ಈ ತಪಾಸಣೆಯಲ್ಲಿ ಜಿಲ್ಲಾ ಅರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಅರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ. ದೀಪಾ ಪ್ರಭು, ಡಾ. ಚಿರಾಗ್ ಮತ್ತಿತರರು ಇದ್ದರು.

Category
ಕರಾವಳಿ ತರಂಗಿಣಿ