image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಡೇನ್ ಗ್ಯಾಸ್‌ ಸಿಲಿಂಡ‌ರ್ ಸಾಗಾಟ ಲಾರಿ ಚಾಲಕರಿಂದ ಬೈಕಂಪಾಡಿಯಲ್ಲಿ ಮುಷ್ಕರ

ಇಂಡೇನ್ ಗ್ಯಾಸ್‌ ಸಿಲಿಂಡ‌ರ್ ಸಾಗಾಟ ಲಾರಿ ಚಾಲಕರಿಂದ ಬೈಕಂಪಾಡಿಯಲ್ಲಿ ಮುಷ್ಕರ

ಮಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂಡೇನ್ ಗ್ಯಾಸ್‌ ಸಿಲಿಂಡ‌ರ್ ಸಾಗಾಟ ಲಾರಿ ಚಾಲಕರು ಸೋಮವಾರ ಬೈಕಂಪಾಡಿಯಲ್ಲಿ ಮುಷ್ಕರ ನಡೆಸಿದರು. ಸಿಲಿಂಡ‌ರ್ ಸಾಗಾಟ ಲಾರಿ ಚಾಲಕರು ರಸ್ತೆಗೆ ಇಳಿಯದೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಮತ್ತು ಕೇರಳದ ಗ್ಯಾಸ್ ಕಂಪೆನಿಯ ಅಧಿಕಾರಿಗಳು ಲಾರಿ ಚಾಲಕರ ಸಂಘಟನೆಯ ಧುರೀಣರೊಂದಿಗೆ ಮಾತುಕತೆ ನಡೆಸಿದರು. ಮೂರು ತಿಂಗಳೊಳಗಾಗಿ ಗ್ಯಾಸ್‌ ಸಿಲಿಂಡರ್‌ಗಳ ಕೊರತೆ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದ ಬಳಿಕ ಚಾಲಕರು ಮುಷ್ಕರವನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಲಾರಿ ಚಾಲಕ ಹಾಗೂ ಕಣ್ಣೂರಿನ ಸಿಐಟಿಯು ಕಾರ್ಯದರ್ಶಿ ಶಾಜಿ ಅವರು 'ಇಂಡೇನ್‌ ಗ್ಯಾಸ್‌ ಸಾಗಾಟ ಲಾರಿಗಳಿಗೆ ಗ್ಯಾಸ್‌ ಸಿಲಿಂಡ‌ರ್ ಪಡೆಯಲು 8-10 ಗಂಟೆಗಳ ಕಾಯಬೇಕಾಗಿದೆ. ಇದರಿಂದಾಗಿ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ . ಇದೀಗ 24 ಗಂಟೆಗಳ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಈ ಕಾರಣದಿಂದಾಗಿ ನಾವು ಅನಿವಾರ್ಯವಾಗಿ ಸಿಲಿಂಡ‌ರ್ ಸಾಗಾಟವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ಮಾಡಿರುವುದಾಗಿ ತಿಳಿಸಿದರು. ರಿಜೆಕ್ಟ್ ಮಾಡಲಾದ ಸಿಲಿಂಡರ್‌ಗಳ ಬದಲಿಗೆ ಹೊಸ ಸಿಲಿಂಡರ್‌ಗಳನ್ನು ತರಿಸಲಾಗುತ್ತಿಲ್ಲ. ಅಡುಗೆ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಕೊರತೆ ಒಂದು ವರ್ಷದಿಂದ ಇದೆ. ಆದರೆ ಗ್ಯಾಸ್ ಕಂಪೆನಿಗಳು ಸಮಸ್ಯೆಯನ್ನು ಬಗೆಹರಿಸಲು ಗಮನ ನೀಡದ ಕಾರಣದಿಂದಾಗಿ ಅನಿವಾರ್ಯವಾಗಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು ಎಂದು ಹೇಳಿರುವ ಲಾರಿ ಚಾಲಕರು 'ಮೂರು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸದಿದ್ದರೆ, ಸಂಬಂಧಪಟ್ಟ ಗ್ಯಾಸ್ ಕಂಪೆನಿಯ ಮುಖ್ಯಸ್ಥರಿಗೆ ನೋಟಿಸ್‌ ನೀಡಿ ಪ್ರತಿಭಟನೆ ನೀಡುವುದಾಗಿ ಎಚ್ಚರಿಸಿದರು.

Category
ಕರಾವಳಿ ತರಂಗಿಣಿ