image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರರಿಗೆ ಆರ್ಥಿಕ ನೆರವು

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ನೇಕಾರರಿಗೆ ಆರ್ಥಿಕ ನೆರವು

ಮಂಗಳೂರು:  ನೇಕಾರ್ ಸಮ್ಮಾನ್ ಯೋಜನೆಯಡಿ ಕೈಮಗ್ಗ ಹಾಗೂ ವಿದ್ಯುತ್‍ಮಗ್ಗ ನೇಕಾರರಿಗೆ ವಾರ್ಷಿಕವಾಗಿ ಒಂದು ಬಾರಿಗೆ ರೂ. 5000 ಗಳ ಸಹಾಯಧನವನ್ನು ಸರ್ಕಾರದಿಂದ ಡಿ.ಬಿ.ಟಿ ಮೂಲಕ (ನೇರ ನಗದು ವರ್ಗಾವಣೆ) ನೀಡಲಾಗುತ್ತಿದೆ.
    2024-25ನೇ ಸಾಲಿನಲ್ಲಿ ಸೌಲಭ್ಯ ಪಡೆದಿರುವ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ಪಟ್ಟಿಯಲ್ಲಿ ಪ್ರಸ್ತುತ ಸಾಲಿನಲ್ಲಿ ಮೃತರಾಗಿರುವ, ನೇಕಾರಿಕೆ  ವೃತ್ತಿ ಬಿಟ್ಟಿರುವ, ಬೇರೆ ಕಡೆ ಸ್ಥಳಾಂತರಗೊಂಡಿರುವ ನೇಕಾರರನ್ನು ಹೊರತುಪಡಿಸಿ ನೇಯ್ಗೆ ಚಟುವಟಿಕೆಯಲ್ಲಿ ತೊಡಗಿರುವ ಮತ್ತು 2025-26ನೇ ಸಾಲಿನ ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ    ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ನೋಂದಣಿಯಾಗಿರುವ ಕೈಮಗ್ಗ ನೇಕಾರರು ಹಾಗೂ ಕಳೆದ ಸಾಲಿನಲ್ಲಿ ನೋಂದಣಿಯಾಗದೇ ಇರುವ ನೇಕಾರರ ಚಟುವಟಿಕೆಯಲ್ಲಿ ತೊಡಗಿರುವ ಅರ್ಹ ಕೈಮಗ್ಗ ಮತ್ತು ವಿದ್ಯುತ್ ಮಗ್ಗ ನೇಕಾರರು ಅರ್ಜಿ ನಮೂನೆಗಳನ್ನು ತಮ್ಮ ನೇಕಾರ ಸಹಕಾರ ಸಂಘಗಳಿಂದ/ ಈ ಕಛೇರಿಯಿಂದ ಪಡೆದು ಸಂಘದ ಮೂಲಕ ಈ ಕಛೇರಿಗೆ ಸಲ್ಲಿಸಬೇಕು. ವೈಯಕ್ತಿಕ ನೇಕಾರರಾಗಿದ್ದಲ್ಲಿ ನೇಕಾರ್ ಸಮ್ಮಾನ್ ಅರ್ಜಿ ನಮೂನೆಗಳನ್ನು ಕಛೇರಿಯಿಂದ ಪಡೆದು ಸಲ್ಲಿಸಬಹುದು.
 ಕೈ ಮಗ್ಗ ನೇಕಾರರು ಸಲ್ಲಿಸಬೇಕಾದ  ದಾಖಲಾತಿಗಳು :- ಆಧಾರ್ ಕಾರ್ಡ್, ರೇಷನ್ ಕಾರ್ಡ್, ನೇಕಾರ್ ಸಮ್ಮಾನ್ ಐಡಿ / ಪೆಹಚಾನ್ ಕಾರ್ಡ್, ಆಧಾರ್ ರಾಷ್ಟ್ರೀಯ ಖಾತೆ ಪಾಸ್‍ಬುಕ್ ಪ್ರತಿ, ಕೈಮಗ್ಗ ನೇಕಾರಿಕೆ ವೃತ್ತಿಯಲ್ಲಿ ಇರುವ ಫೋಟೊ, ಕೈಮಗ್ಗದಲ್ಲಿ ಕಾರ್ಯನಿರ್ವಹಿಸುವ ಕೂಲಿ ನೇಕಾರರ ಮಜೂರಿ ಪಾವತಿ ರಶೀದಿ.
ವಿದ್ಯುತ್ ಮಗ್ಗ ನೇಕಾರರು ಸಲ್ಲಿಸಬೇಕಾದ ದಾಖಲಾತಿಗಳು:- ಘಟಕದ ಮಾಲೀಕರು /ನೇಕಾರರು/ ಕಾರ್ಮಿಕ ಆಧಾರ್ ಐiಟಿಞeಜ ಬ್ಯಾಂಕ್ ಖಾತೆ ಪಾಸ್‍ಬುಕ್ ಪ್ರತಿ, ವಿದ್ಯುತ್ ಮಗ್ಗ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಫಲಾನುಭವಿಯ ಫೋಟೋ, ವಿದ್ಯುತ್ ಸಂಪರ್ಕ ಹೊಂದಿರುವ ಆರ್.ಆರ್.ನಂ. ನ ವಿದ್ಯುತ್ ಬಿಲ್., ಘಟಕದ ಉದ್ಯೋಗ್ ಆಧಾರ್ / ಪಿ.ಎಂ.ಟಿ / ಉದ್ದಿಮೆದಾರರ ಪರವಾನಿಗೆ ಪತ್ರದ ಪ್ರತಿ,  ಘಟಕದಲ್ಲಿ ಕಾರ್ಯನಿರ್ವಹಿಸುವ ನೇಕಾರರು / ಕಾರ್ಮಿಕರ ವಿವರಗಳನ್ನು ಒಳಗೊಂಡ ಮಜೂರಿ ಪಾವತಿಯ ಪ್ರತಿ, ಮಾಲೀಕರಿಂದ ನೇಕಾರರು/ಕಾರ್ಮಿಕರ ಬಗ್ಗೆ ದೃಢೀಕರಣ ಪ್ರತಿ. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್ 15.  
    ಹೆಚ್ಚಿನ ಮಾಹಿತಿಗೆ ಅಥವಾ ಭರ್ತಿ ಮಾಡಿದ ಅರ್ಜಿಗಳನ್ನು   ನಗರದ ಯೆಯ್ಯಾಡಿ  ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕರ ಕಛೇರಿಗೆ (ದೂರವಾಣಿ ಸಂಖ್ಯೆ: 0824-2225056) ಸಲ್ಲಿಸಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ