ಮಂಗಳೂರು: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ( ಮೆಸ್ಕಾಂ ) ಉಡುಪಿ ಉಪವಿಭಾಗದ ನಿಟ್ಟೂರು–ಮಲ್ಪೆ 33 ಕೆವಿ ಎ.ಬಿ ಕೇಬಲ್ ಮಾರ್ಗಕ್ಕೆ ಹೆಚ್ಚುವರಿಯಾಗಿ ಪಾಳೆಕಟ್ಟೆಯಿಂದ ಮಲ್ಪೆ 33/11ಕೆವಿ ವಿದ್ಯುತ್ ಉಪಕೇಂದ್ರದ ತನಕ 33ಕೆವಿ ಯು.ಜಿ ಕೇಬಲ್ಅಳವಡಿಸುವ ಕಾಮಗಾರಿಯು ಪೂರ್ಣಗೊಂಡಿದ್ದು, ಯಾವುದೇ ಕ್ಷಣದಲ್ಲಿ 2.2 ಕಿ.ಮೀ ಉದ್ದದ 33ಕೆವಿ ಭೂಗತ ಕೇಬಲ್ ಮಾರ್ಗವನ್ನು ಜು.30 ರ ನಂತರ ಚಾಲನೆಗೊಳಿಸಲಿದೆ.
ಅದುದರಿ೦ದ ಪಾಳೆಕಟ್ಟೆ, ತೆಂಕನಿಡಿಯೂರು ಜಂಕ್ಷನ್, ವೈಷ್ಣವಿ ಲೇ ಔಟ್, ಉದ್ದಿನ ಹಿತ್ಲು, ವಡಬಾಂಡೇಶ್ವರ ಪ್ರದೇಶಗಳಲ್ಲಿ ಯಾವುದೇ ರೀತಿಯ ಭೂ ಅಗೆತ , ಇತರ ಯಾವುದೇ ಕಾಮಗಾರಿ ಕೈಗೊಳ್ಳುವ ಮೊದಲು ಮೆಸ್ಕಾಂ ಅನುಮತಿಯನ್ನು ಪಡೆಯಬೇಕಾಗಿ ಸಾರ್ವಜನಿಕರಿಗೆ/ಸಂಸ್ಥೆಗಳಿಗೆ ತಿಳಿಸಲಾಗಿದೆ.
ಈ ಸೂಚನೆಗಳನ್ನು ಉಲ್ಲಂಘಿಸಿ ಉಂಟಾಗಬಹುದಾದ ಕಷ್ಟನಷ್ಟಗಳಿಗೆ ಮತ್ತು ಅನುಮತಿ ಪಡೆಯದೆ ನಡೆಸುವ ಚಟುವಟಿಕೆಗಳಿಗೆ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ . ಇದನ್ನು ಸಾರ್ವಜನಿಕರು ಗಮನಿಸಿ, ಸಹಕರಿಸುವಂತೆ ಕೋರಲಾಗಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.