ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE), ಮಣಿಪಾಲನ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೌತಶಾಸ್ತ್ರ ವಿಭಾಗದಲ್ಲಿ ಸಂಶೋಧನೆ ನಡೆಸಿದ ಇಂಚರಾ ಡಿ.ಆರ್. ಅವರಿಗೆ ಪಿಎಚ್.ಡಿ. ಪದವಿ ಲಭಿಸಿದೆ.
ಅವರ ಸಂಶೋಧನಾ ಪ್ರಬಂಧದ ಶೀರ್ಷಿಕೆ = “Study of Structural, Optical, Multiferroic and Photo response properties of Hexagonal Manganites”. ಈ ಸಂಶೋಧನೆ, ಪ್ರಾಧ್ಯಾಪಕಿ ಡಾ. ಮಮತಾ ಡಿ. ದೈವಜ್ಞ ಅವರ ಮಾರ್ಗದರ್ಶನದಲ್ಲಿ ನಡೆದಿದೆ.
ಇಂಚರಾ ಡಿ.ಆರ್. ಅವರು ಶಿವಮೊಗ್ಗದ ಎಟಿಎನ್ಸಿ ಕಾಲೇಜಿನ ಮಾಜಿ ಪ್ರಾಂಶುಪಾಲರಾದ ಡಾ. ಡಿ.ಜಿ. ರಾಮೇಶ್ ಹಾಗೂ ಗೃಹಿಣಿಯಾದ ಶ್ರೀಮತಿ ಅಂಬಿಕಾ ರಾಮೇಶ್ ಅವರ ಮಗಳು. ತಂದೆಯೆಂಬ ಬೆನ್ನೆಲುಬು ಶಕ್ತಿಯಾಗಿ, ತಾಯಿಯ ತ್ಯಾಗದ ನೆರಳಲ್ಲಿ ಈ ಸಾಧನೆ ಸಾಧ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನನ್ನ ತಂದೆ ನನಗೆ ಈ ದಾರಿಗೆ ದಿಕ್ಕು ತೋರಿಸಿದರು, ಆದರೆ ಅಂತಿಮ ಗುರಿ ನೋಡಿ ಹೆಮ್ಮೆಪಡುವ ಮೊದಲು ನಮ್ಮನ್ನೆಲ್ಲಾ ಬಿಟ್ಟುಹೋದರು. ಈ ಸಾಧನೆ ಅವರಿಗೆ ಅರ್ಪಣೆ ಎಂದು ಇಂಚರಾ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.