image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಲ್ಪಸಂಖ್ಯಾತರ ಸೇವಾ ಸಂಸ್ಥೆಗಳಿಗೆ ಅನುದಾನ: ಅರ್ಜಿ ಆಹ್ವಾನ

ಅಲ್ಪಸಂಖ್ಯಾತರ ಸೇವಾ ಸಂಸ್ಥೆಗಳಿಗೆ ಅನುದಾನ: ಅರ್ಜಿ ಆಹ್ವಾನ

ಮಂಗಳೂರು: ವೃದ್ಧಾಶ್ರಮ/ ಅನಾಥಾಶ್ರಮ ಮತ್ತು ಎಚ್.ಐ.ವಿ./ಏಡ್ಸ್ ನಿರ್ಗತಿಕರ ಕೇಂದ್ರ ಮತ್ತು ಖಾಸಗಿ ಹಾಸ್ಟೆಲ್ ನಡೆಸುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಜೈನ್ ಸೇವಾ ಸಂಸ್ಥೆಗಳಿಗೆ ಸಂಸ್ಥೆಗಳಲ್ಲಿ ಕನಿಷ್ಟ 25 ಫಲಾನುಭವಿಗಳಿಗಿಂತ ಹೆಚ್ಚಿರುವ ಸಂಸ್ಥೆಗಳಿಂದ ಆಹಾರ, ಔಷಧಿ ಮತ್ತು ಇತರ ವೆಚ್ಚಗಳಿಗೆ ಮತ್ತು ಖಾಸಗಿ ವಸತಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಆಹಾರ ವೆಚ್ಚವನ್ನು ನೀಡುವ ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
 ಹೆಚ್ಚಿನ ಮಾಹಿತಿಗೆ ಪಾಂಡೇಶ್ವರ ಓಲ್ಡ್ ಕೆಂಟ್ ರಸ್ತೆಯ ಮೌಲಾನಾ ಆಝಾದ್ ಭವನದಲ್ಲಿರುವ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿಯವರ ಕಛೇರಿ (ದೂರವಾಣಿ ಸಂಖ್ಯೆ 0824-2211078/ 2433078)  ಅಥವಾ ಆಯಾಯ ತಾಲೂಕಿನ ಮಾಹಿತಿ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ