ಮಂಗಳೂರು; ಕಲಾಸಾಧನ ಮಂಗಳೂರು ಇದರ ವತಿಯಿಂದ ಸ್ವರಧಾರಾ ಸಂಗೀತ ಉತ್ಸವವನ್ನು ರವಿವಾರ ಸಂಜೆ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಡೆದ ಕಲಾಸಾಧನ 'ಸ್ವರಧಾರ'ಸಂಗೀತ ಉತ್ಸವದಲ್ಲಿ ಹಿಂದೂಸ್ತಾನಿ ಗಾಯಕ ಪಂಡಿತ್ ಕುಮಾರ್ ಮರ್ದೂರ್ ಅವರು ಹಿಂದೂಸ್ತಾನಿ ಗಾಯನ ಶ್ರೀ ಶ್ರೀಪಾದರಾಜರ ಕೃತಿ ಹರೇ ವೆಂಕಟಾ ಶೈಲವಲ್ಲಭಪಾಲಿಸು ನೀ ಎನ್ನಾ ||ದುರಿತ ದೂರ ನೀನಲ್ಲದೆ ಧರೆಯೊಳು ದೊರೆಗಳ ನಾ ಕಾಣೆ, ಶ್ರೀ ಶಂಕರಾಚಾರ್ಯರ ಸೇರಿದಂತೆ ಹಿಂದೂಸ್ತಾನಿ....ಭಕ್ತಿ ,ಭಜನ್ ಸಂಗೀತದೊಂದಿಗೆ ನರೆದ ಪ್ರೇಕ್ಷಕ ಸಮೂಹದಲ್ಲಿ ಸಂಗೀತ ರಸಧಾರೆ ಹರಿಸಿದರು.ಅವರ ಜೊತೆ ಅಕ್ಷಯ ಜೋಶಿ ಧಾರವಾಡ್ ತಬಲಾ ಮತ್ತುಸತೀಶ್ ಭಟ್ ಹೆಗ್ಗಾರ್ ಹಾರ್ಮೊನಿ ಯಂ ಸಾಥ್ ನೀಡಿದರು.
ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಉದ್ಘಾಟಿಸಿ ಶುಭ ಹಾರೈಸಿದರು. ಸಮಾರಂಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ,ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ ಮಾಜಿ ಮೇಯರ್ ದಿವಾಕರ್, ಮನಪಾ ಸ್ಮಾರ್ಟ್ ಸಿಟಿ ಯೋಜನೆಯ ಮಹಾಪ್ರ ಬಂಧಕ ಅರುಣ ಪ್ರಭಾ ಹಾಗೂ ಮಂಜೇಶ್ವರ ಮೋಹನ್ ದಾಸ್ ಕಾಮತ್, ಅನಘಾ ರಿಫೈನರಿಯ ಆಡಳಿತ ನಿರ್ದೇಶಕ ಸಾಂಬಾ ಶಿವರಾವ್, ಭಾರತ್ ಆಗೋ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ.ಅರುಣ್ ರೈ ಮೊದಲಾದವರು ಉಪಸ್ಥಿತರಿದ್ದರು.
ಉತ್ಸವದಲ್ಲಿ ಕಲಾ ಸಾಧನ ಕೇಂದ್ರದ ನಿರ್ದೇಶಕಿ ವಿಭಾ ಶ್ರೀನಿವಾಸ ನಾಯಕ್ ಹಾಗೂ ಸಲಹೆಗಾರರಾದ ಶ್ರೀನಿವಾಸ ನಾಯಕ್ ಇಂದಾಜೆ ಅತಿಥಿಗಳನ್ನು ಸ್ವಾಗತಿಸಿದರು. ಪಾಂಡುರಂಗ ಆಚಾರ್ಯ ವಂದಿಸಿದರು.