ಮಂಗಳೂರು : ಪ್ರಪ್ರಥಮ ಬಾರಿಗೆ ಇಸ್ಕಾನ್ ಶ್ರೀ ಕೃಷ್ಣ ಬಲರಾಮ ಮಂದಿರ ಪಿ.ವಿ.ಎಸ್ ಕಲಾಕುಂಜ ಕೊಡಿಯಾಲ್ ಬೈಲ್ ನಲ್ಲಿ ಅದ್ದೂರಿಯಾದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಮಾಡುತ್ತಿದೆ ಎಂದು ಅಧ್ಯಕ್ಷರಾದ ಗುಣಕರ ರಾಮದಾಸ್ ರವರು ತಿಳಿಸಿದರು. ಅವರು ಇಸ್ಕಾನ್ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಗವಾನ್ ಶ್ರೀಕೃಷ್ಣನ ದೈವಸ್ವರೂಪ ಅವತಾರಕ್ಕೆ ಸಮರ್ಪಿತ ಎರಡು ದಿನಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಮ್ಮಿಲಿತವಾದ ಹಬ್ಬ. ಭಕ್ತಿ, ಸಂಸ್ಕೃತಿ ಮತ್ತು ಕ್ರಿಯಾತ್ಮತೆಯ ಮೂಲಕ ಮಂಗಳೂರ ಜನತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಮಗಾ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಗರದಲ್ಲಿ ಶ್ರೀಕೃಷ್ಣ ಪ್ರಜ್ಞೆಯನ್ನು ಪಸರಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ವಿನೋದಾವಳಿಗಳು, ಸ್ಪರ್ಧೆಗಳು, ಡಿಜಿಟಲ್ ಪ್ರಚಾರ, ಪವಿತ್ರ ಆಚರಣೆಗಳು ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
15 ಆಗಸ್ಟ್, ಬೆಳಿಗ್ಗೆ 9.00 ರಿಂದ ರಾತ್ರಿ 9.00 ರವರೆಗೆ.ಇಸ್ಕಾನ್ ಮಂಗಳೂರು - ಶ್ರೀಕೃಷ್ಣ ಬಲರಾಮ ಮಂದಿರ, ಪಿ.ವಿ.ಎಸ್. ಕಲಾಕುಂಜ, ಕೊಡಿಯಾಲ್ ಬೈಲ್ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಮಹಾಭಿಷೇಕ, ಭಜನೆ, ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
16 ಆಗಸ್ಟ್ ರಂದು ಶಾರದಾ ವಿದ್ಯಾಲಯ ಮೈದಾನ. ಕೊಡಿಯಾಲ್ ಬೈಲ್ ನಲ್ಲಿ ಸಂಜೆಯು ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬದ ಫುಡ್ ಸ್ಟಾಲ್, ಭಕ್ತಿಗೀತೆ ರಸಮಂಜರಿ, ಹಾಗೂ ಆತ್ಮಸ್ಪೂರ್ತಿದಾಯಕವಾದ ಮಧ್ಯರಾತ್ರಿ ಆರತಿ ಒಳಗೊಂಡಿವೆ.
ಆಳ್ವಾಸ್ ಶಿಕ್ಷಣ ಸಂಸ್ಥೆ ಪ್ರಸ್ತುತ ಪಡಿಸಲಿರುವ ಶ್ರೀಕೃಷ್ಣನ ಬಾಲಲೀಲೆ ಒಳಗೊಂಡ ನೃತ್ಯ ಸಂಗೀತ ಮತ್ತು ನಾಟಕ ರೂಪಾಂತರ
ಮಕ್ಕಳು ಮತ್ತು ಎಲ್ಲಾ ವಯಸ್ಸಿನವರಿಗಾಗಿ ವಿವಿಧ ಫ್ಯಾನ್ಸಿ ಡ್ರೆಸ್, ಕೃಷ್ಣನ ವಿಷಯಾಧಾರಿತ ಚಿತ್ರಕಲೆ, ಕ್ವಿಜ್ ಇವುಗಳನ್ನು ಆಯೋಜಿಸಲಾಗಿದ್ದು ಆಧ್ಯಾತ್ಮವನ್ನು ವಿವಿಧ ವಿನೋದಾವಳಿಗಳ ಮೂಲಕ ವೃದ್ಧಿಪಡಿಸುವುದು. ತಮ್ಮ ಹೆಸರು ನೋಂದಾವಣೆಗಾಗಿ ಸಂಪರ್ಕಿಸಬೇಕಾದ ಮೊಬೈಲ್ 7259862303
ಹಬ್ಬದ ಆಚರಣೆಯನ್ನು ಪಾಕಶಾಲೆಯ ರುಚಿಯೊಂದಿಗೆ ಉಣಬಡಿಸಲು ಮಂಗಳೂರಿನ ಸುಪ್ರಸಿದ್ದ ಫುಡ್ ಬ್ರಾಂಡ್‌ಗಳು ಅಧಿಕೃತವಾದ ಪ್ರಸಾದಮ್ ಮತ್ತು ರುಚಿಕರ ತಿಂಡಿ ತಿನಿಸುಗಳೊಂದಿಗೆ ತಯಾರಾಗಿದ್ದಾರೆ.
ಒಂದು ಶಕ್ತಿದಾಯಕವಾದ ಅಧ್ಯಾತ್ಮದ ಅನುಭೂತಿ ನೀಡುವ ಶ್ರೀಕೃಷ್ಣನ ಜನ್ಮವನ್ನು ಪುನರ್‌ಬಿಂಬಿಸುವ ದೈವೀಕವಾದ ಜನ್ಮ ಆರತಿಯು ನಿಖರವಾಗಿ ಮಧ್ಯರಾತ್ರಿ ವೇಳೆ ಜರಗಲಿದ್ದು ಭಕ್ತಾಧಿಗಳು ಇದರಲ್ಲಿ ಭಾಗಿಯಾಗಲು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಗಣ್ಯರು ಶ್ರೀ ಸನಂದನ ದಾಸ, ಉಪಾಧ್ಯಕ್ಷರು, ಇಸ್ಕಾನ್, ಶ್ರೀ ಸುಂದರ ಗೌರ ದಾಸ, ಸಂಚಾಲಕರು, ಇಸ್ಕಾನ್, ಶ್ರೀ ಮನು, ಸಂಚಾಲಕರು ಉಪಸ್ಥಿತರಿದ್ದರು.