image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಂಪವೆಲ್ ರೋಹನ್ ಸ್ಕ್ವೇರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಪಂಪವೆಲ್ ರೋಹನ್ ಸ್ಕ್ವೇರ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಭಾರತದ 79ನೇ ಸ್ವಾತಂತ್ರ್ಯ ದಿನವನ್ನು ರೋಹನ್ ಕಾರ್ಪೋರೇಶನ್ ಸಂಸ್ಥೆ  ಪಂಪ್ ವೆಲ್‌ನ ರೋಹನ್ ಸ್ಕ್ವೇರ್ ಆವರಣದಲ್ಲಿ ಭವ್ಯವಾಗಿ ಆಚರಿಸಿತು. ಕಾರ್ಯಕ್ರಮವು ಬೆಳಿಗ್ಗೆ 8ಗಂಟೆಗೆ ರಾಷ್ಟ್ರಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಸಂಸ್ಥೆಯ ಸಿಬ್ಬಂದಿಗಳು, ಕಾರ್ಮಿಕರು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನಿವೃತ್ತ ಸೇನಾ ಅಧಿಕಾರಿ ಸುಬೇದಾರ್ ಅಪ್ಪು ಶೆಟ್ಟಿ ರವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ  ರೋಹನ್ ಕಾರ್ಪೊರೇಷನ್ ಸಂಸ್ಥೆಯ ಸ್ಥಾಪಕರಾದ ರೋಹನ್ ಮೊಂತೆರೋ “ಸ್ವಾತಂತ್ರ್ಯವು ಕೇವಲ ಒಂದು ದಿನದ ಆಚರಣೆಯಲ್ಲ, ಪ್ರತಿದಿನವೂ ಅದನ್ನು ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಯುವ ಪೀಳಿಗೆ ದೇಶಾಭಿವೃದ್ಧಿಯಲ್ಲಿ ತೊಡಗಿಕೊಳ್ಳುವುದು ಅತ್ಯವಶ್ಯಕ ” ಎಂದು ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಸೇನಾ ಅಧಿಕಾರಿ ಸುಬೇದಾರ್ ಅಪ್ಪು ಶೆಟ್ಟಿ ಅವರು ರಾಷ್ಟ್ರಸೇವೆಗೆ ಸಲ್ಲಿಸಿದ ಮಹತ್ತರ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಧನ್ಯವಾದ ಸ್ವೀಕರಿಸಿ ಮಾತನಾಡಿನ ಅವರು “ದೇಶ ಸೇವೆ ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣ. ಈ ಗೌರವ ನನ್ನ ನಿವೃತ್ತ ಜೀವನದಲ್ಲೂ ದೇಶಸೇವೆಯ ನೆನಪುಗಳನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ. ಓದು, ಉದ್ಯೋಗ, ಹಣ — ಇವು ಜೀವನದ ಒಂದು ಭಾಗ ಮಾತ್ರ. ಇಂದಿನ ಯುವ ಪೀಳಿಗೆ ದೇಶಕ್ಕಾಗಿ ಸೇವೆ ಸಲ್ಲಿಸುವ ಧ್ಯೇಯವನ್ನೂ ಹೃದಯದಲ್ಲಿ ಇಟ್ಟುಕೊಳ್ಳಬೇಕು” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕ ಡಿಯಾನ್ ಮೊಂತೆರೋ ಮತ್ತು ಜನರಲ್ ಮ್ಯಾನೇಜರ್  ಸುಮನಾ ಭಾಗವಹಿಸಿದ್ದರು.

Category
ಕರಾವಳಿ ತರಂಗಿಣಿ