image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವನಿತಾ ಪಾರ್ಕ್ ನಲ್ಲಿ 'ಹಸಿರೇ ಉಸಿರು' ವನಮಹೋತ್ಸವ

ವನಿತಾ ಪಾರ್ಕ್ ನಲ್ಲಿ 'ಹಸಿರೇ ಉಸಿರು' ವನಮಹೋತ್ಸವ

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಮಟ್ಟಾರು ವಿಠಲ ಕಿಣಿ ವನಿತಾ ಪಾರ್ಕ್ ನಲ್ಲಿ ಗಿಡ ನೆಡುವ ಮೂಲಕ ಲಯನ್ಸ್ ಕ್ಲಬ್ ಪಾಂಡೇಶ್ವರ ಮತ್ತು ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ಮಂಗಳೂರು ಇದರ ಆಶ್ರಯದಲ್ಲಿ ನಡೆದ ಹಸಿರೇ ಉಸಿರು ವನಮ ಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ಉಪ ಪೊಲೀಸ್ ಆಯುಕ್ತ ಎಚ್ .ಎನ್. ಮಿಥುನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, ಗಿಡ ಮರಗಳಿಂದ ತುಂಬಿದ ಪರಿಸರವನ್ನು ರಕ್ಷಿಸಿ ಮುಂದಿನ ತಲೆ ಮಾರಿಗೆ ಬಳಸಲು ಅನುವು ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ.ಪ್ರಾಣಿ ಪಕ್ಷಿ ಮನುಷ್ಯರಿಗೆ ಆಸರೆಯಾದ ಗಿಡ ಮರಗಳ ಸಂರಕ್ಷಣೆಯ ಕಾಳಜಿ ಅಗತ್ಯ ಎಂದರು.

ಪಾಂಡೇಶ್ವರ ಲಯನ್ಸ್ ಕ್ಲಬ್ ಅಧ್ಯಕ್ಷ ಲ. ಸುರೇಂದ್ರ ಪಾಂಡೇಶ್ವರ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ನಿಕಟ ಪೂರ್ವ ಕಾರ್ಪೋರೇಟರ್ ಸಂಧ್ಯಾ ಮೋಹನ್ ಆಚಾರ್ ,ಪತ್ರಕರ್ತ ಪುಷ್ಪರಾಜ್ ಬಿ.ಎನ್,ಎಂಜೆಎಫ್, ಕಾರ್ಯದರ್ಶಿ ಲ. ರೋಷನ್ ಪ್ರಸಾದ್ ಎಂಜೆಎಫ್, ಖಜಾಂಚಿ ಲ. ಬಿಎಸ್ ಕಿಶೋರ್,ಲಯನ್ಸ್ ವಲಯ ಅಧ್ಯಕ್ಷ ಲ.ಬಿಎಸ್ ರವಿಶಂಕರ್ ಪಿಎಂಜೆಎಫ್ ಲ.ಮೋಹನ್ ಆಚಾರ್, ಲ. ಚಂದ್ರಕಾಂತ್, ಲ.ಮೋಹನ್ ಸಾಲಿಯನ್, ಲ. ಗಣೇಶ್ ಸಾಲಿಯನ್ ಎಂಜೆಎಫ್, ಎಲ್.ಎಂ. ಯು.ಎಂ.ಎಫ್. ಕೀರ್ತಿ ಜೈನ್, ಲ. ಸುರೇಶ್ ಅತ್ತಾವರ, ಲ. ಶೈಲೇಶ್ ಕುಮಾರ್ ಮತ್ತು ಲಯನ್ಸ್ ಸದಸ್ಯರು,ಗ್ಲೋಬಲ್ ಗ್ರೀನ್ ಇಕೋ ಫೌಂಡೇಶನ್ ನ ಸದಸ್ಯರು ಉಪಸ್ಥಿತರಿದ್ದರು ‌

Category
ಕರಾವಳಿ ತರಂಗಿಣಿ