image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಎಂಎಫ್‌ಎಂಇ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ದ.ಕ.ದಲ್ಲಿ ಈಗಾಗಲೇ 269 ಮಂದಿ ಸಹಾಯಧನ ಪಡೆದು ಉದ್ದಿಮೆ ಆರಂಭಿಸಿದ್ದಾರೆ- ಕ್ಯಾ. ಚೌಟ

ಪಿಎಂಎಫ್‌ಎಂಇ ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ದ.ಕ.ದಲ್ಲಿ ಈಗಾಗಲೇ 269 ಮಂದಿ ಸಹಾಯಧನ ಪಡೆದು ಉದ್ದಿಮೆ ಆರಂಭಿಸಿದ್ದಾರೆ- ಕ್ಯಾ. ಚೌಟ

ಮಂಗಳೂರು : ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ (ಪಿಎಂಎಫ್‌ಎಂಇ) ನಿಯಮಬದ್ಧಗೊಳಿಸುವಿಕೆ ಯೋಜನೆಯಡಿ ದ.ಕ.ದಲ್ಲಿ ಈಗಾಗಲೇ 269 ಮಂದಿ ಸಹಾಯಧನ ಪಡೆದು ಉದ್ದಿಮೆ ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 850 ಉದ್ದಿಮೆ ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದ್ದು, ಮುಂದಿನ ಮಾರ್ಚ್ ಒಳಗೆ ಅಧಿ ಕಾರಿಗಳು ಯುದ್ಧದೋಪಾದಿಯಲ್ಲಿ ಕೆಲಸ ಮಾಡಿ ಗುರಿ ಸಾಧನೆ ಮಾಡಬೇಕು ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದ್ದಾರೆ.

ದ.ಕ. ಜಿಲ್ಲಾಡಳಿತ, ಜಿ.ಪಂ., ಕೃಷಿ ಇಲಾಖೆ ದ.ಕ., ಕೆಪೆಕ್ ಲಿಮಿಟೆಡ್ ಬೆಂಗಳೂರು ಸಹಯೋಗದಲ್ಲಿ ನಗರದ ಜಿಪಂ ನೇತ್ರಾವತಿ ಸಭಾಂಗಣದಲ್ಲಿ  ಪಿಎಂಎಫ್‌ಎಂಇ ಯೋಜನೆಯ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದ.ಕ. ಜಿಲ್ಲೆಗೆ ಸಾಕಷ್ಟು ಆಹಾರ ಸಂಸ್ಕರಣಾ ಉದ್ದಿಮೆ ಸ್ಥಾಪಿಸುವ ಸಾಮರ್ಥ್ಯ ಇದೆ. ಯುದ್ಧದೋಪಾದಿಯಲ್ಲಿ ಕೆಲಸ ಮಾಡಿದರೆ ಮಾತ್ರ ಈ ಗುರಿ ಸಾಧಿಸಲು ಸಾಧ್ಯ. ಅದಕ್ಕಾಗಿ ಶೀಘ್ರ ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಲಿದ್ದೇನೆ ಎಂದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಹೊನ್ನಪ್ಪ ಗೋವಿಂದೇಗೌಡ ಮಾತನಾಡಿ, ಯೋಜನೆಯ ಆರಂಭದಲ್ಲಿ ದ.ಕ. ಜಿಲ್ಲೆಗೆ ಸಾಗರೋತ್ಪನ್ನ ಕಿರು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಮಾತ್ರ ಅವಕಾಶವಿತ್ತು. ನಂತರದ ದಿನಗಳಲ್ಲಿ ಎಲ್ಲ ಆಹಾರ ಉತ್ಪನ್ನಗಳಿಗೆ ಅವಕಾಶ ನೀಡಿದ ಬಳಿಕ 269 ಮಂದಿ ಉದ್ದಿಮೆ ಸ್ಥಾಪಿಸಿದ್ದಾರೆ. ಇವರಿಗೆ ಒಟ್ಟು 40 ಕೋಟಿ ರೂ. ಸಹಾಯಧನ ಬಿಡುಗಡೆಯಾಗಿದೆ. ಜಿಲ್ಲೆಯ ಇನ್ನಷ್ಟು ಮಂದಿ ಫಲಾನುಭವಿಗಳು ಯೋಜನೆಯ ಪ್ರಯೋಜನ ಪಡೆದು ಉದ್ಯಮ ವಲಯದಲ್ಲಿ ಗುರುತಿಸಿಕೊಳ್ಳು ವಂತಾಗಬೇಕು ಎಂದರು. ಜಿಲ್ಲಾ ಕೈಗಾರಿಕಾ ಇಲಾಖೆಯ ಗೋಕುಲ್‌ದಾಸ್ ನಾಯಕ್, ಲೀಡ್ ಬ್ಯಾಂಕ್ ಅಧಿಕಾರಿ ಕವಿತಾ ಶೆಟ್ಟಿ ಕೃಷಿ ಇಲಾಖೆ ಉಪ ನಿರ್ದೇಶಕಿ ಕುಮುದಾ, ಕೃಷಿ ಇಲಾಖೆ ಪುತ್ತೂರು ಉಪನಿರ್ದೇಶಕ ಶಿವಶಂಕರ್ ಎಚ್., ಕೆಪೆಕ್ ನೋಡೆಲ್ ಅಧಿಕಾರಿ ಅರವಿಂದ್ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ