ಮಂಗಳೂರು: ತಿಲಕ್‌ರಾಜ್ ದಕ್ಷಿಣ ಕನ್ನಡ ಜಿಲ್ಲಾ ಡಿಎಆರ್ ಪೊಲೀಸ್ ಇಲಾಖೆಯಲ್ಲಿ 17 ವರ್ಷಗಳ ಸೇವೆಯನ್ನು ಪೂರೈಸಿ 05-09-2025 ರಂದು ಎ.ಆರ್.ಎಸ್.ಐ. ಆಗಿ ಮುಂಭಡ್ತಿ ಹೊಂದಿದ್ದಾರೆ. ಇವರು 2008 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ಡಿಎಆರ್ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿರುವುದು ಅಲ್ಲದೆ, ಇವರು ಭಯೋತ್ಪಾದನಾ ನಿಗ್ರಹ ದಳ, ಕೂಡ್ಲು ಬೆಂಗಳೂರಿನಲ್ಲಿ 03 ತಿಂಗಳ ಕಾಲ ನಡೆಸುವ ಕೌಂಟರ್ ಟೆರರಿಸಂ ಕೋರ್ಸನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇವರು ಒಟ್ಟು 17 ವರ್ಷಗಳ ಸೇವಾವಧಿಯಲ್ಲಿ ಇಲಾಖೆಯ ಎಲ್ಲಾ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು, ಇವರು ನಿರ್ವಹಿಸಿದ ಅತ್ಯುತ್ತಮ ಸೇವೆಗಾಗಿ 2025 ನೇ ಸಾಲಿನಲ್ಲಿ ಮಾನ್ಯ ಡಿಜಿ & ಐಜಿಪಿ, ಕರ್ನಾಟಕ ರಾಜ್ಯ ರವರ ಪ್ರಶಂಸನಾ ಪದಕಕ್ಕೆ ಭಾಜನರಾಗಿರುತ್ತಾರೆ.