ಬಂಟ್ವಾಳ: ನಾವೂರು ಗ್ರಾಮದ ಮಲೆಕೋಡಿಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೆಂಪುಕಲ್ಲು ಗಣಿಗಾರಿಕೆಯ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣಿಗಾರಿಕೆಯ ಖಚಿತ ಮಾಹಿತಿಯಂತೆ ಪಿಎಸ್‌ಐ ಮಂಜುನಾಥ ಟಿ. ಅವರು ಸಿಬಂದಿ ಜತೆಗೆ ದಾಳಿ ನಡೆಸಿದ್ದು, ಆರೋಪಿ ಹರೀಶ್ ಪೂಜಾರಿ ಎಂಬಾತ ಕೂಲಿಯಾಳುಗಳನ್ನು ಇಟ್ಟುಕೊಂಡು ಪರವಾನಿಗೆ ಇಲ್ಲದೆ ಕಲ್ಲು ಗಣಿಗಾರಿಕೆ ಮಾಡುತ್ತಿರುವುದು ಕಂಡುಬಂದಿದೆ. ಇಬ್ಬರು ವ್ಯಕ್ತಿಗಳು ಕೆಂಪು ಕಲ್ಲನ್ನು ಯಂತ್ರದ ಮೂಲಕ ಕತ್ತರಿಸುತ್ತಿದ್ದು, ಓರ್ವ ಲಾರಿಗೆ ತುಂಬಿಸುತ್ತಿದ್ದನು. ಪೊಲೀಸ್ ದಾಳಿಯ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಕಲ್ಲು ತುಂಬುತ್ತಿದ್ದ ಲಾರಿಗೂ ಯಾವುದೇ ಸಾಗಾಟ ಪರವಾನಿಗೆ ಇರಲಿಲ್ಲ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.