ಸುಳ್ಯ: ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ವಿಶ್ವ ಕರ್ಮ ಜಯಂತಿ ಕಾರ್ಯಕ್ರಮ ಸುಬ್ರಮಣ್ಯದ ಆದಿ ಸುಬ್ರಮಣ್ಯ ಸಭಾಭವನದಲ್ಲಿ ನಡೆಯಿತು. ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಲಳಂಬೆ ಕಾರ್ಯಕ್ರಮ ವನ್ನು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ಜಿಲ್ಹಾ ಒಬಿಸಿ ಮೋರ್ಚಾ ದ ಅಧ್ಯಕ್ಷರಾದ ಮಹೇಶ್ ಜೋಗಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಶ್ವಕರ್ಮ ದಿನಾಚರಣೆ ಮಹತ್ವ ವನ್ನು ಉಪನ್ಯಾಸಕಿಯಾದ ನಳಿನಾಕ್ಷಿ ಕಲ್ಮಡ್ಕ ತಿಳಿಸಿ ಕೊಟ್ಟರು. ರಾಜ್ಯ ಒಬಿಸಿ ಕಾರ್ಯದರ್ಶಿ ಆರ್ ಸಿ ನಾರಾಯಣ ರೆಂಜ ಮಾತನಾಡಿ ವಿಶ್ವ ಕರ್ಮ ಸಮಾಜದ ಕೊಡುಗೆ ಮಹತ್ತರವಾದುದು ಎಂದರು.
ಕಾರ್ಯಕ್ರಮದಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿ ವಿನಯ ಕಂದಡ್ಕ, ಪ್ರದೀಪ್ ರೈ, ಜಿಲ್ಲಾ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಗಳಾದ ಮೋನಪ್ಪ ದೇವಸ್ಯ, ಶಶಿಧರ ಕಲ್ಮಂಜ, ಜಿಲ್ಲಾ ಒಬಿಸಿ ಕಾರ್ಯದರ್ಶಿ ಚಂದ್ರಶೇಖರ ಪನೆ, ಸದಾನಂದ ಆಚಾರ್ಯ ಉಪಸ್ಥಿತರಿದ್ದರು. ಒಬಿಸಿ ಮೋರ್ಚಾದ ಮಂಡಲ ಅಧ್ಯಕ್ಷರಾದ ಗಿರೀಶ್ ಐನೇಕಿದು ಸ್ವಾಗತಿಸಿದರು. ಮಂಡಲದ ಒಬಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಅಡ್ಕರ್ ವಂದಿಸಿದರು. ವಿಜಯ್ ಚಾರ್ಮತ ಕಾರ್ಯಕ್ರಮ ನಿರೂಪಿಸಿದರು.