ಮಂಗಳೂರು: ಕರ್ನಾಟಕ ರಾಜ್ಯ ಸರಕಾರದಿಂದ ಇದೇ ತಿಂಗಳ 22-09-2025 ರಿಂದ 7-10-2025 ವರೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಜ್ಯಾತೀಯ ಜನಗಣತಿ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಿರುತ್ತಾರೆ. ಈ ಸಮಯದಲ್ಲಿ ಪ್ರತಿ ಮನೆಮನೆಗೆ ಆಶಾ ಕಾರ್ಯಕರ್ತರು, ಶಿಕ್ಷಕರು ಭೇಟಿ ನೀಡಿ ಜಾತಿ ಪಂಗಡಗಳನ್ನು ಕೇಳುವಾಗ ನಾವು ತೀಯಾ ಎಂದು ಮಾತ್ರ ಜಾತಿ ನಮೂದಿಸುವ ಕಾಲಂ ಸಂಖ್ಯೆ 9 ರಲ್ಲಿ ನಮೂದಿಸಬೇಕು ಎಂದು ಭಾರತೀಯ ತಿಯಾ ಸಮಾಜ್ ನ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ ತಿಳಿಸಿದರು. ಅವರು ನಗರದ ಕುದ್ರೋಳಿ ಭಗವತಿ ದೇವಸ್ಥಾನ ದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ,
ಜಾತಿ ಸಮೀಕ್ಷೆಗೆ ಬಂದಿರುವ ಅಧಿಕಾರಿ ವರ್ಗದವರು ನಾವು ಹೇಳಿದ ಜಾತಿಯನ್ನು ನಮೂದಿಸಿದ್ದಾರೆಯೇ ಎಂದು ಖಚಿತ ಪಡಿಸಬೇಕು. ಅರ್ಜಿ ನಮೂನೆಯಲ್ಲಿ ಟಿಕ್ ಹಾಕಿರುವ ದಾಖಲೆಗಳನ್ನು ಪರಿಶೀಲಿಸುವುದು ಅತೀ ಮುಖ್ಯವಾಗಿರುತ್ತದೆ. ಈ ಹಿಂದೆ ಆದ ತಪ್ಪು ಮತ್ತೆ ಮಾಡುವುದು ಬೇಡ ನಾವು ಸರ್ಕಾರದ ಮೂಲ ಸೌಕರ್ಯದಿಂದ ವಂಚಿತರಾಗುತ್ತೀದ್ದೇವೆ .ನಾವು ತೀಯಾ ಸಮಾಜವೆಂದು ನಮೂದಿಸಿ ನಮ್ಮ ಸಮಾಜವನ್ನು ಜಾಗೃತಗೊಳಿಸಿ ಆಮೂಲಕ ತೀಯಾ ಸಮಾಜದ ಜನ ಸಂಖ್ಯೆ ಎಷ್ಟಿದೆ ಎಂಬುವುದನ್ನು ಸರಕಾರದ ಗಮನಕ್ಕೆ ತಂದು ಸರಕಾರದ ವತಿಯಿಂದ ದೊರಕುವ ಸವಲತ್ತುಗಳನ್ನು ಪಡೆಯಲು ಅವಕಾಶವಾಗುತ್ತದೆ. ರಾಜ್ಯಮಟ್ಟದಲ್ಲಿ ತೀಯಾ ಸಮಾಜಕ್ಕೆ ಇತರ ಸಮಾಜದವರಿಗೆ ನೀಡಿದಂತಹ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸೋಣ ಆದುದರಿಂದ ಸಮಾಜ ಬಾಂಧವರು ಜಾತಿ ನಮೂದಿಸುವಾಗ ತೀಯಾ ಎಂದು ನಮೂದಿಸುವಂತೆ ಭಾರತೀಯ ತೀಯಾ ಸಮಾಜದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಸದಾಶಿವ್ ಉಳ್ಳಾಲ್ ರವರು ಕೋರಿರುತ್ತಾರೆ. ಹಾಗೆಯೇ ಭಾಷೆಯ ಕಾಲಂನಲ್ಲಿ ಮಾತೃ ಭಾಷೆ ಮಲಯಾಳಿ ಎಂದು ಕಡ್ಡಾಯವಾಗಿ ನಮೂದಿಸಬೇಕು ಎಂದು ವಿನಂತಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಕುದ್ರೋಳಿ ಕ್ಷೇತ್ರದ ಅಧ್ಯಕ್ಷರಾದ ಶ್ರೀ ಗಣೇಶ್ ಕುಂಟಲ್ಪಾಡಿ, ತೀಯಾ ಸಮಾಜ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್, ಉಳ್ಳಾಲ ವಲಯದ ಅಧ್ಯಕ್ಷರು ಜಯಂತ್ ಕೊಂಡಾಣ, ಉಳ್ಳಾಲ ಭಗವತಿ ಕ್ಷೇತ್ರದ ಆಡಳಿತ ಮುಖೇಸರರು ಸುರೇಶ್ ಭಟ್ಟನಗರ್, ಉಳ್ಳಾಲ ಕ್ಷೇತ್ರದ ಅಧ್ಯಕ್ಷರು ಚಿದಾನಂದ ಗುರಿಕಾರ, ದಿನೇಶ್ ಕುಂಪಲ, ಉಮೇಶ್ ಬೆಂಜನಪದವು, ಮಂಗಳೂರು ವಲಯ ಅಧ್ಯಕ್ಷರಾದ ರಾಕೇಶ್ ಕುಮಾರ್ ಕೋಶಾಧಿಕಾರಿ ರೋಹಿತಾಶ್ವ ಕುಡುಪು ಮಾಜಿ ಅಧ್ಯಕ್ಷರಾದ ಉಮೇಶ್ ಕುಮಾರ್, ತೀಯಾ ಸಮಾಜದ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ರಾಜ್ ಗೋಪಾಲ್ ಸೇರಿದಂತೆ ಹಲವು ಪ್ರಮುಖಥು ಉಪಸ್ಥಿತರಿದ್ದರು.