ಮಂಗಳೂರು: ಎಂಎಸ್ ಎಂಇ ಮೂಲಕ ಯುವ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಉತ್ತಮ ಅವಕಾಶ ವಿದೆ ಎಂದು ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ. ಅವರು ಪ್ರೊಡಕ್ಟಿವಿಟಿ ಕೌನ್ಸಿಲ್ ಮಂಗಳೂರು, ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗ ದಲ್ಲಿ ಶನಿವಾರ ರೆಡ್ ಕ್ರಾಸ್ ಪ್ರೇರಣ ಸಭಾಂಗ ಣದಲ್ಲಿ ಹಮ್ಮಿಕೊಂಡಿದ್ದ ಎಂಪಿಸಿ ರೋಟರಿ ಕೋಸ್ಟಲ್ ಎಂಎಸ್ ಎಂಇ ಸ್ಟಾರ್ ಅಫ್ ಕೌನ್ ಕ್ಲೀವ್ 2025ಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಮಾನವ ಸಂಪನ್ಮೂಲ ಬಳಕೆಗೆ ಎಂಎಸ್ ಎಂಇ ಪೂರಕ ವಾದ ವೇದಿಕೆ. ಸರಕಾರದ ಸವಲತ್ತುಗಳನ್ನು ಬ್ಯಾಂಕ್ ನ ಮೂಲಕ ಹೇಗೆ ಪಡೆದುಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ಇಂತಹ ಸಮಾವೇಶಗಳು ಸಹಕಾರಿ ಯಾಗುತ್ತದೆ. ಕರಾವಳಿಯಲ್ಲಿ ಬಹು ಭಾಷಾ ಕಲಿಕೆಗೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ. ಇದರಿಂದ ದೇಶ ವಿದೇಶಗಳಲ್ಲಿ ಹೆಚ್ಚಿನ ಅವಕಾಶ ಪಡೆಯಲು ಸಾಧ್ಯ ಎಂದು ಯು.ಟಿ.ಖಾದರ್ ಸಲಹೆ ನೀಡಿದರು.
ಕರ್ಣಾಟಕ ಬ್ಯಾಂಕ್ ಲಿ,ನ ನಿರ್ದೇಶಕ ಜೀವನ್ ದಾಸ್ ನಾರಾಯಣ್ ಕಾರ್ಯಕ್ರಮ ವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿ ಗಳಾಗಿ ಕೆನರಾ ಬ್ಯಾಂಕ್ ಮಹಾಪ್ರಬಂಧಕ ಮಂಜುನಾಥ ಸಿಂಗೈ ಆದಾಯ ತೆರಿಗೆ ಮಂಗಳೂರು ಆಯುಕ್ತ ರಂಗರಾಜನ್ ಉಪಸ್ಥತರಿದ್ದರು.
ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷಭಾಸ್ಕರ ರೈ ಕಟ್ಟ, ಕಾರ್ಯದರ್ಶಿ ವಿಕಾಸ ಕೋಟ್ಯಾನ್, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ಅಧ್ಯಕ್ಷ ರಾಮರಾವ್,ಕಾರ್ಯದರ್ಶಿ ರವೀಂದ್ರ ರಾವ್, ರೋಟರಿ ಪಿಡಿಜೆ ಡಾ.ದೇವದಾಸ ರೈವೇದಿಕೆಯಲ್ಲಿ ದೀಪ ಬೆಳಗಿಸಿದ ಜೀವನ್ ದಾಸ್ ನಾರಾಯಣ್ ನಿರ್ದೇಶಕ ಕರ್ಣಾಟಕ ಬ್ಯಾಂಕ್ ಲಿ, ಉಪಸ್ಥಿತರಿದ್ದರು ಎಸ್ ಎಸ್ ಕಾಮತ್ ಸ್ವಾಗತಿಸಿದರು. ಗಾಯತ್ರಿ ಅನಿಲ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.