image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ, ರೂ.9.51 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್ ಘೋಷಣೆ

ಎಂಸಿಸಿ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆ, ರೂ.9.51 ಕೋಟಿ ನಿವ್ವಳ ಲಾಭ, ಶೇಕಡಾ 10 ಡಿವಿಡೆಂಡ್ ಘೋಷಣೆ

ಮಂಗಳೂರು: 2024–25ನೇ ಹಣಕಾಸು ವರ್ಷದಲ್ಲಿ ಎಂ.ಸಿ.ಸಿ. ಬ್ಯಾಂಕ್ ಎಲ್ಲಾ ಹಣಕಾಸು ನಿಯತಾಂಕಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಮತ್ತು ತನ್ನ ಷೇರುದಾರರಿಗೆ 10% ಲಾಭಾಂಶವನ್ನು ಘೋಷಿಸಿದೆ. 2024–25ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ₹9.51 ಕೋಟಿಗಳ ಅಭೂತಪೂರ್ವ ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಹೇಳೀದರು. ಅವರು  ಸಪ್ಟಂಬರ್ 21ರಂದು ನಡೆದ ಬ್ಯಾಂಕಿನ 107ನೇ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,  ಬ್ಯಾಂಕಿನ ದಾಖಲೆಯ ಕಾರ್ಯಕ್ಷಮತೆಯನ್ನು ಸದಸ್ಯರ ಗಮನಕ್ಕೆ ತಂದರು. ₹9.51 ಕೋಟಿ ನಿವ್ವಳ ಲಾಭ, ₹705.40 ಕೋಟಿ ಠೇವಣಿಗಳು (10% ಹೆಚ್ಚಳ), ₹535.49 ಕೋಟಿ ಮುಂಗಡಗಳು (25.21% ಬೆಳವಣಿಗೆ), ₹830.30 ಕೋಟಿ ದುಡಿಯುವ ಬಂಡವಾಳ (10.03% ಹೆಚ್ಚಳ), ₹32.43 ಕೋಟಿ ಷೇರು ಬಂಡವಾಳ (14.07% ಬೆಳವಣಿಗೆ), ಎನ್‌ಪಿಎ 1.40%, ಖಔಂ 1.15%, ಮಾರ್ಚ್ 31, 2025 ರಂತೆ ಸಿಅರ್‌ಎಆರ್ 18.92% ಇದ್ದು ಇದು ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಕನಿಷ್ಟ ಮಿತಿ 12ಕ್ಕಿಂತ ಹೆಚ್ಚಾಗಿರುತ್ತದೆ ಮತ್ತು ವ್ಯವಹಾರ ವಹಿವಾಟು ₹1300 ಕೋಟಿಯನ್ನು ದಾಟಿದೆ ಎಂದರು.

ಕಳೆದ 7 ವರ್ಷಗಳಲ್ಲಿ ಬ್ಯಾಂಕಿನ ಪ್ರಸ್ತುತ ಆಡಳಿತ ಮಂಡಳಿಯಡಿಯಲ್ಲಿನ ತ್ವರಿತ ಪ್ರಗತಿ ಮತ್ತು ಬೆಳವಣಿಗೆಯನ್ನು ತೋರಿಸುತ್ತಾ, ಬ್ಯಾಂಕಿನೊಂದಿಗೆ ದೃಢವಾಗಿ ನಿಂತು ಆಡಳಿತ ಮಂಡಳಿಯ ಕಾರ್ಯಯೋಜನೆಗಳನ್ನು ಬೆಂಬಲಿಸಿದ ಎಲ್ಲಾ ಸದಸ್ಯರು, ಗ್ರಾಹಕರು ಮತ್ತು ಸಿಬ್ಬಂದಿಗೆ ಅಧ್ಯಕ್ಷರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಪೂರ್ವಜರ ದೂರದೃಷ್ಟಿಯನ್ನು ನೆನಪಿಸಿಕೊಳ್ಳುತ್ತಾ, ಅವರ ಮಹಾನ್ ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ಯುವ ಮತ್ತು ಆರ್ಥಿಕವಾಗಿ ಸದೃಢವಾಗಿರುವ ಮತ್ತು ಬಲಿಷ್ಟವಾಗಿರುವ ಬ್ಯಾಂಕ್ ಅನ್ನು ನಮ್ಮ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಮಹತ್ವವನ್ನು ಹೇಳಿದರು. ಬ್ಯಾಂಕಿಗೆ ನಿಷ್ಟರಾಗಿರಲು ಮತ್ತು ಸಂಸ್ಥೆ ಅಥವಾ ಅದರ ಆಡಳಿತ ಮಂಡಳಿಯ ವಿರುದ್ಧ ವದಂತಿಗಳನ್ನು ಹರಡುವುದನ್ನು ನಿಲ್ಲಿಸಲು ಅವರು ಸದಸ್ಯರನ್ನು ಒತ್ತಾಯಿಸಿದರು. ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಸಹಾಯವಾಗುವಂತೆ ನೇರವಾಗಿ ಸಲಹೆಗಳನ್ನು ಬ್ಯಾಂಕಿನೊAದಿಗೆ ಹಂಚಿಕೊಳ್ಳಲು ಸದಸ್ಯರಲ್ಲಿ ಕೇಳಿಕೊಂಡರು. 

ಉಡುಪಿ ಜಿಲ್ಲೆಯ ಸಂತೆಕಟ್ಟೆಯಲ್ಲಿ ಅಕ್ತೊಬರ್ 5ನೇ ತಾರೀಕಿನಂದು ಬ್ಯಾಂಕಿನ 21ನೇ ಶಾಖೆಯ ಉದ್ಘಾಟನೆಯನ್ನು ಸದಸ್ಯರಿಗೆ ತಿಳಿಸಿ ಎಲ್ಲಾ ಸದಸ್ಯರನ್ನು ಈ ಕಾರ್ಯಕ್ರಮಕ್ಕೆ ಹಾಜರಾಗಲು ಆಹ್ವಾನಿಸಿದರು. ಮುಂದಿನ ವಾರ್ಷಿಕ ಸಾಮಾನ್ಯ ಸಭೆಯ ಮೊದಲು 25 ಶಾಖೆಗಳು ಮತ್ತು 20 ಎಟಿಎಂಗಳನ್ನು ವಿಸ್ತರಿಸುವ ಬ್ಯಾಂಕಿನ ದೃಷ್ಟಿಕೋನವನ್ನು ಅವರು ಹಂಚಿಕೊAಡರು, ಈ ಕಾರ್ಯಯೋಜನೆಗೆ ನಿರಂತರ ಬೆಂಬಲವನ್ನು ಕೋರಿದರು. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಎಲ್ಲಾ ಸದಸ್ಯರಿಗೆ ವಂದಿಸಿದರು.

ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು ನೋಟರಿ ಪಬ್ಲಿಕ್ ಆಗಿ ನೇಮಕಗೊಂಡಿದ್ದಕ್ಕಾಗಿ ಮೂಡುಬಿದ್ರಿಯ ಶ್ರೀ ಪ್ರವೀಣ್ ಸಂದೀಪ್ ಲೋಬೊ ವಕೀಲರನ್ನು ಸನ್ಮಾನಿಸಲಾಯಿತು. 

ನಿರ್ದೇಶಕರಾದ ಶ್ರೀ ಅಂಡ್ರ್ಯೂ ಡಿಸೋಜ, ಜೋಸೆಫ್ ಎಮ್. ಅನಿಲ್ ಪತ್ರಾವೊ, ಡಾ| ಜೆರಾಲ್ಡ್ ಪಿಂಟೊ, ಡೇವಿಡ್ ಡಿಸೋಜ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ರೋಶನ್ ಡಿ’ಸೋಜ, ಹೆರಾಲ್ಡ್ ಮೊಂತೇರೊ, ಜೆ. ಪಿ. ರೊಡ್ರಿಗಸ್, ವಿನ್ಸೆಂಟ್ ಲಸ್ರಾದೊ, ಮೆಲ್ವಿನ್ ವಾಸ್, ಶ್ರೀಮತಿ ಐರಿನ್ ರೆಬೆಲ್ಲೊ, ಡಾ| ಫ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಮಹಾಪ್ರಬಂಧಕ ಸುನಿಲ್ ಮಿನೇಜಸ್, ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ಉಪಸ್ಥಿತರಿದ್ದರು.

ಮಹಾಪ್ರಬಂಧಕ ಸುನಿಲ್ ಮಿನೇಜಸ್ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊನಿರೂಪಿಸಿದರು.

Category
ಕರಾವಳಿ ತರಂಗಿಣಿ