image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಒಳಾಂಗಣದ ಮೇಲ್ಛಾವಣಿ ಉದ್ಘಾಟನೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಒಳಾಂಗಣದ ಮೇಲ್ಛಾವಣಿ ಉದ್ಘಾಟನೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಒಳಾಂಗಣದ ಮೇಲ್ಛಾವಣಿ ಜಿಲ್ಲೆಯಲ್ಲಿಯೇ ಪ್ರಥಮ ಎಂಬಂತೆ ವಿನೂತನ ಮಾದರಿಯಲ್ಲಿ ನವೀಕರಣಗೊಂಡಿದ್ದು, ರವಿವಾರ ಸಂಜೆ ಉದ್ಘಾಟನೆಗೊಂಡಿತು. ಪಾರಂಪರಿಕ ದೇವಸ್ಥಾನದ ವಾಸ್ತು ವಿನ್ಯಾಸದಲ್ಲಿ ನಿರ್ಮಾಣಗೊಂಡ ಮೇಲ್ಛಾವಣಿಯನ್ನು ಕ್ಷೇತ್ರದ ಅಭಿವೃದ್ದಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರು ಉದ್ಘಾಟಿಸಿದರು. 

ಕ್ಷೇತ್ರದ ಅಧ್ಯಕ್ಷ ಜೈರಾಜ್‌ ಎಚ್‌. ಸೋಮಸುಂದರಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್‌ ಆರ್‌. ಪೂಜಾರಿ, ಉಪಾಧ್ಯಕ್ಷರಾದ ಊರ್ಮಿಳಾ ರಮೇಶ್‌, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಸಂತೋಷ್‌ ಕುಮಾರ್‌ ಜೆ., ಕಿಶೋರ್‌ ದಂಡಕೇರಿ, ಕ್ಷೇತ್ರ ಅಭಿವೃದ್ದಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಪ್ರಮುಖರಾದ ವೇದಕುಮಾರ್‌, ಹರೀಶ್‌ ಕುಮಾರ್‌, ಸೂರ್ಯಕಾಂತ್‌ ಜೆ. ಸುವರ್ಣ, ಹರಿಕೃಷ್ಣ ಬಂಟ್ವಾಳ, ಡಾ| ಬಿ.ಜಿ. ಸುವರ್ಣ, ಪದ್ಮನಾಭ ಕೋಟ್ಯಾನ್‌, ಎಂ. ಶಶಿಧರ ಹೆಗ್ಡೆ, ಬಾಸ್ಕರ ಕೆ., ಅಶೋಕ್‌ ಡಿ.ಕೆ., ಚಂದನ್‌ ದಾಸ್‌ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು. ಮೇಲ್ಛಾವಣಿ ನಿರ್ಮಾಣದ ಕಂಟ್ರಾಕ್ಟರ್‌ ಶಂಕರ್‌ ಸುವರ್ಣ ಅವರನ್ನು ಜನಾರ್ದನ ಪೂಜಾರಿ ಅವರು ಅಭಿನಂದಿಸಿದರು.

Category
ಕರಾವಳಿ ತರಂಗಿಣಿ