ಮಂಗಳೂರು: ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆ, ಜಿಲ್ಲೆ 317 D, ದಕ್ಷಿಣ ಕನ್ನಡ ಹಾಸನ, ಕೊಡಗು, ಚಿಕ್ಕಮಂಗಳೂರು ಹೀಗೆ 4 ಕಂದಾಯ ಜಿಲ್ಲೆಯನ್ನು ಒಳಗೊಂಡ ನಮ್ಮ ಲಯನ್ಸ್ ಸೇವಾ ಸಂಸ್ಥೆ, ಈ ಬಾರಿಯ ನಮ್ಮ ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಲಯನ್ ಕುದ್ದಿ ಅರವಿಂದ ಶೆಣೈ ಅವರ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ಸತತ 3 ವರ್ಷಗಳಿಂದ ಲಯನ್ಸ್ ಸದಸ್ಯರು ತುಳುನಾಡಿನ ಸಾಂಸ್ಕೃತಿಕ ಪ್ರತೀಕದ ಬಿಂಬವಾಗಿರುವ ಹುಲಿ ವೇಷದ ಕುಣಿತವನ್ನು ಲಯನ್ಸ್ ಮತ್ತು ಲಿಯೋ ಸದಸ್ಯರು ಹಾಗೂ ಜಿಲ್ಲೆಯ ಆಯ್ದ ಹುಲಿವೇಷದ ತಂಡಗಳಿಗೆ ಆಹ್ವಾನ ನೀಡಿ ಸಿಂಹದ ಕಲೊಟು ಪಿಲಿಗೊಬ್ಬು ಎನ್ನುವ ಅತ್ಯಂತ ಅದ್ದೂರಿ ಕಾರ್ಯಕ್ರಮವನ್ನು ಮಂಗಳೂರು ನಗರದ ಕದ್ರಿ ಬಯಲು ರಂಗ ಮಂದಿರದಲ್ಲಿ ಆಚರಿಸುತ್ತಾ ಬಂದಿದ್ದು, ಈ ವರ್ಷ ಸೆ.27ರಂದು ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಿಂದ ಸಂಜೆ 4 ಗಂಟೆಗೆ ಹುಲಿ ವೇಷ ಕುಣಿತಗಳ ಭವ್ಯ ಮೆರವಣಿಗೆ ಕದ್ರಿ ಬಯಲು ರಂಗಮಂಟಪಕ್ಕೆ ಬರುವುದು, ಸಂಜೆ 5 ರಿಂದ ಸಭಾ ಕಾರ್ಯಕ್ರಮ ಜರಗಲಿರುವುದು ಎಂದು ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲ. ಸುದರ್ಶನ್ ಪಡಿಯಾರ್ ತಿಳಿಸಿದರು. ಈ ಸಂದರ್ಭದಲ್ಲಿ ಹುಲಿವೇಷಕ್ಕೆ ಸಂಬಂಧಪಟ್ಟ 9 ಜನ ಅಯ್ದ ದಿಗ್ಗಜರನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸುತ್ತಿದ್ದು, ಕಾರ್ಯಕ್ರಮದ ಉದ್ಘಾಟಕರಾಗಿ ಲಯನ್ಸ್ ಜಿಲ್ಲಾ 317 D ಇದರ ರಾಜ್ಯಪಾಲರಾದ ಅರವಿಂದ ಶೆಣೈ ಮತ್ತು ಮಮತಾ ಶೆಣೈ ದಂಪತಿಗಳು ದೀಪ ಪ್ರಜ್ವಲನದ ಮೂಲಕ ಉದ್ಘಾಟನೆ ಮಾಡುವರು, ಮುಖ್ಯ ಅತಿಥಿಗಳಾಗಿ ಮೂಡುಬಿದರೆ ಆಳ್ವಾಸ್ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ಮೋಹನ್ ಆಳ್ವ ಹಾಗೂ ಗೌರವಾನ್ವಿತ ಅತಿಥಿಗಳಾಗಿ ಲಯನ್ ವಿವಿ ಕೃಷ್ಣ ರೆಡ್ಡಿ, ಲಯನ್ ಮೋಹನ್ ಕುಮಾರ್, ಲಯನ್ ಸಂಜಿತ್ ಶೆಟ್ಟಿ, ಮಂಗಳೂರು ದಕ್ಷಿಣದ ಶಾಸಕರಾದ ಸನ್ಮಾನ್ಯ ಡಿ ವೇದವ್ಯಾಸ್ ಕಾಮತ್, ಸದಾನಂದ ಶೆಟ್ಟಿ, ಮನೋಹರ ಶೆಟ್ಟಿ, ನಿಹಾಲ್ ತಾವೋ ಅವರು ಭಾಗವಹಿಸುವರು ಎಂದರು.
ನಿಕಟಪೂರ್ವ ರಾಜ್ಯಪಾಲರಾದ ಲಯನ್ ಬಿ ಎಂ-ಭಾರತಿ, ಲಯನ್ ತಾರನಾಥ್ ಕೊಪ್ಪ ಹಾಗೂ ಲಯನ್ ಗೋವರ್ಧನ್ ಶೆಟ್ಟಿ ಅವರು ಶುಭ ಹಾರೈಸಲಿದ್ದಾರೆ.ಸಭಾ ಕಾರ್ಯಕ್ರಮದ ಬಳಿಕ ಲಯನ್ಸ್ ಮತ್ತು ಲಿಯೋ ಸದಸ್ಯರು ಹಾಗೂ ಆಯ್ದ ಹುಲಿವೇಷದ ತಂಡಗಳಿಂದ ಹುಲಿ ವೇಷದ ಕುಣಿತ ನೆರವೇರುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜ್ಯೋತಿ ಶ್ರೀಧರ್ ಶೆಟ್ಟಿ, ಸುಜಿತ್ ಕುಮಾರ್, ಗಣೇಶ್ ಶೆಟ್ಟಿ, ನಿಖಿಲ್ ಶೆಟ್ಟಿ ಲೋಕೇಶ್ ಉಲ್ಲಾಳ್ ಮತ್ತು ಮನೋರಂಜನ್ ಉಪಸ್ಥಿತರಿದ್ದರು.