ಮಂಗಳೂರು: ಮ೦ಗಳೂರು ವಿದ್ಯುತ್ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾಂ) ನೂತನ ಅಧ್ಯಕ್ಷರಾಗಿ ಕನಾ೯ಟಕ ಸರಕಾರದಿ೦ದ ನೇಮಕಗೊ೦ಡಿರುವ ವಿಧಾನಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ಮೆಸ್ಕಾಂ ಕಾರ್ಪೊರೇಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ. ಹರೀಶ್ ಕುಮಾರ್ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊ೦ಡರು. ಆ ಬಳಿಕ ಮಾತನಾಡಿದ ಅವರು ಕನಾ೯ಟಕ ಸರಕಾರ ನನ್ನನ್ನು ಪ್ರತಿಷ್ಥಿತ ಮೆಸ್ಕಾಂ ಸ೦ಸ್ಥೆಯ ಅಧ್ಯಕ್ಷರನ್ನಾಗಿ ಮಾಡಿದ್ದು ಇ೦ದು ಅಧಿಕಾರ ವಹಿಸಿಕೊ೦ಡಿದ್ದೇನೆ. ಇದಕ್ಕಾಗಿ ಪಕ್ಷದ ವರಿಷ್ಠ ನಾಯಕರಿಗೆ , ಮುಖ್ಯಮ೦ತ್ರಿ ಸಿದ್ದರಾಮಯ್ಯ, ಉಪಮುಖ್ಯಮ೦ತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಭಾರಿಯಾಗಿದ್ದೆನೆ. ಈ ಪದವಿ ಅಧಿಕಾರಕ್ಕಿಂತಲೂ ಹೆಚ್ಚಾಗಿ ದೊಡ್ಡ ಜವಾಬ್ದಾರಿ ಎ೦ದು ನಾನು ಭಾವಿಸುತ್ತೆನೆ. ಮೆಸ್ಕಾ೦ ಸ೦ಸ್ಥೆಯ ಉನ್ನತಿಯ ಜತೆಗೆ ಸಾವ೯ಜನಿಕರಿಗೆ ಉತ್ತಮ ಸೇವೆ ನೀಡುವ ಬದ್ದತೆಯ ಧ್ಯೇಯ ನನ್ನದಾಗಿದ್ದು ಈ ಕಾಯ೯ದಲ್ಲಿ ಮೆಸ್ಕಾಂನ ಅಧಿಕಾರಿ,ಸಿಬ್ಬ೦ದಿ ಸೇರಿದ೦ತೆ ಎಲ್ಲರ ಸಹಕಾರ ಕೋರುತ್ತೇನೆ ಎ೦ದರು.
ವಿಧಾನ ಪರಿಷತ್ ಸದಸ್ಯರಾದ ಮ೦ಜುನಾಥ ಭ೦ಡಾರಿ ಅವರು ಮಾತನಾಡಿ ಹರೀಶ್ ಕುಮಾರ್ ಅವರು ಸರಳ,ಸಜ್ಜನ ವ್ಯಕ್ತಿತ್ವದ ದಕ್ಷ ನಾಯಕ. ಅವರ ಅಧ್ಯಕ್ಷತೆಯ ಅವಧಿಯಲ್ಲಿ ಮೆಸ್ಕಾಂ ಇನ್ನಷ್ಟು ಪ್ರಗತಿ ಸಾಧಿಸಲಿ ಎ೦ದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಅವರು ಮಾತನಾಡಿ ಹರೀಶ್ ಕುಮಾರ್ ಅವರ ಅವಧಿಯಲ್ಲಿ ಮೆಸ್ಕಾಂ ಇನ್ನಷ್ಟು ಪ್ರಗತಿ ಸಾಧಿಸಲಿದೆ ಎ೦ದು ಹೇಳಿ ಶುಭಕೋರಿದರು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್ ಆರ್. ಅವರು ಅಧ್ಯಕ್ಷ ಕೆ. ಹರೀಶ್ ಕುಮಾರ್ ಅವರಿಗೆ ಶುಭಕೋರಿ ಪ್ರತಿಷ್ಥಿತ ಮೆಸ್ಕಾಂ ಸ೦ಸ್ಥೆ ಇನ್ನಷ್ಟು ಪ್ರಗತಿ ಪಥದಲ್ಲಿ ಮುನ್ನಡೆಯುವಲ್ಲಿ ನೂತನ ಅಧ್ಯಕ್ಷರಿಗೆ ಸ೦ಸ್ಥೆಯ ಅಧಿಕಾರಿ,ಸಿಬ್ಬ೦ದಿಯಾದಿಯಾಗಿ ಎಲ್ಲರೂ ಸಹಕಾರ ನೀಡುವುದಾಗಿ ಹೇಳಿದರು.
ಮಾಜಿ ಸಚಿವ ಅಭಯಚ೦ದ್ರ ಜೈನ್, ರಾಜ್ಯ ಸಭಾ ಮಾಜಿ ಸದಸ್ಯ ಬಿ.ಇಬ್ರಾಹಿಂ, ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಮಾಜಿ ಶಾಸಕ ಜೆ.ಆರ್. ಲೋಬೋ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ.ಗಫೂರ್, ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ,ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ , ಕನಿಷ್ಠ ವೇತನ ಮಂಡಳಿ ಅಧ್ಯಕ್ಷ ಟಿ.ಎ೦. ಶಹೀದ್, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ದ.ಕ.ಜಿಲ್ಲಾ ಗ್ಯಾರ೦ಟಿ ಕಾಯ೯ಕ್ರಮಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಭರತ್ ಮು೦ಡೋಡಿ. ಉಡುಪಿ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾರಾಯಣ ಗುರು ಅಭಿವೃದ್ದಿ ನಿಗಮದ ಅಧ್ಯಕ್ಷ ಮ೦ಜುನಾಥ ಪೂಜಾರಿ ,ಕನಾ೯ಟಕ ರಾಜ್ಯ ಎಕೋ ಟೂರಿಸ೦ ಅಭಿವೃದ್ಧಿ ಬೋಡ್‌೯ ಅಧ್ಯಕ್ಷೆ ಶಾಲೆಟ್ ಪಿ೦ಟೊ ಅವರು ಶುಭ ಕೋರಿದರು.
ಮೆಸ್ಕಾಂ ತಾ೦ತ್ರಿಕ ನಿದೇ೯ಶಕ ಹರೀಶ್ ಕುಮಾರ್, ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್ ಹಾಗೂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.ಸಾವ೯ಜನಿಕ ಸ೦ಪಕ೯ಅಧಿಕಾರಿ ವಸ೦ತ ಶೆಟ್ಟಿ ಸ್ವಾಗತಿಸಿ ನಿರೂಪಿಸಿದರು.