ಮಂಗಳೂರು : ಭಕ್ತರೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಡ್ಡ ಬಂದ ಸಿಬ್ಬಂದಿಯನ್ನು ಹೇ ನಡಿಯೋ ಆಕಡೆ ಎಂದು ಆನೆ ಎತ್ತಿ ಬಿಸಾಡಿರುವ ಘಟನೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಾರ್ಷಿಕ ಜಾತ್ರಾ ಪ್ರಯುಕ್ತ ನಡೆದ ನೀರು ಬಂಡಿ ಉತ್ಸವದಲ್ಲಿ ಆನೆ ಯಶಸ್ವಿನಿ ಆಟವಾಡುತ್ತಿತ್ತು. ಭಕ್ತರೊಂದಿಗೆ ನೀರಿನಲ್ಲಿ ಚೆಲ್ಲಾಟವಾಡುತ್ತಿತ್ತು. ಈ ವೇಳೆ ದೇವಸ್ಥಾನದ ಸಿಬ್ಬಂದಿ ಅಡ್ಡಬಂದಿದ್ದಾನೆ. ಇದರಿಂದ ಕೆರಳಿದ ಆನೆ, ಸಿಬ್ಬಂದಿಯನ್ನು ಸೊಂಡಿಲಿನಿಂದ ಎತ್ತಿ ಸೈಡಿಗೆ ಬಿಸಾಡಿದೆ. ಇದರಿಂದ ಸ್ಥಳದಲ್ಲಿ ಒಂದು ಕ್ಷಣ ಆತಂಕ ಸೃಷ್ಟಿಸಿತು. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಆನೆ ಆಟವಾಡುತ್ತಿರಬೇಕಾದ್ರೆ ಸಿಬ್ಬಂದಿ ಏಕೆ ಅಡ್ಡ ಹೋಗಬೇಕಿತ್ತು ಎಂದು ಅಲ್ಲಿದ್ದವರ ಪ್ರಶ್ನೆಯಾಗಿತ್ತು.