ಮಂಗಳೂರು: 11 ನೇ ವರ್ಷದ ಸರ್ವಧರ್ಮಗಳ ಭಾವೈಕ್ಯಯ ಸಂಗಮವಾದ ಕ್ರಿಸ್ಮಸ್ ಸಂಭ್ರಮಾಚರಣೆ ಬಗ್ಗೆ ಪೂರ್ವಬಾವಿ ಸಭೆ ಐವನ್ ಡಿʼಸೋಜಾ ಅಧ್ಯಕ್ಷತೆಯಲ್ಲಿ ನಡೆಯಿತು. ಕಳೆದ 10 ವರ್ಷಗಳಿಂದ ಕ್ರಿಸ್ಮಸ್, ದೀಪಾವಳಿ, ರಂಜಾನ್ ಹಬ್ಬಗಳನ್ನು ಅಚರಿಸುತ್ತಾ ಬಂದಿದ್ದು, ಮೂರೂ ಧರ್ಮದ ಹಬ್ಬಗಳನ್ನು ಅಚರಿಸುವ ಮೂಲಕ ಸರ್ವ ಧರ್ಮಗಳ ಏಕತೆಯ ಭಾವೈಕ್ಯತೆ ಸಂಕೇತ ಅಗಬೇಕೆಂಬ ಆಶಾವಾದ ಐವನ್ ಡಿಸೋಜಾ ಹೇಳಿದರು.
ಈ ಹಬ್ಬವನ್ನು ದಿನಾಂಕ:22-12-2025ನೇ ಸೋಮವಾರ ಮಧ್ಯಾಹ್ನ 3:00ರಿಂದ 10:00ರವರೆಗೆ ಜೆಪ್ಪು ಮಂಗಳೂರು ಸೈಂಟ್ ಅಂತೋನಿ ಆಶ್ರಮ ತೆರೆದ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು,ಈ ಹಬ್ಬದ ಸಲುವಾಗಿ ಕ್ಯಾರಲ್ ಹಾಡುಗಳ ಸ್ಪರ್ದೆ ಮತ್ತು ಕ್ರಿಸ್ಮಸ್‌ಗೆ ಸಂಬಂಧಪಟ್ಟಂತಹ ವಿವಿಧ ವಿನೋದಾವಳಿಗಳು ನಡೆಯಲಿದ್ದು, ಇದರಲ್ಲಿ ಗೆದ್ದವರಿಗೆ ಪ್ರಥಮ, ದ್ವೀತಿಯ ಮತ್ತು ತೃತೀಯ ಬಹುಮಾನಗಳನ್ನು ನೀಡಲು ತೀರ್ಮಾನಿಸಲಾಗಿದೆ. ಹಾಗೂ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಹಭೋಜನವನ್ನು ಏರ್ಪಡಿಸಲಾಗಿದೆ. ಭಾವೈಕ್ಯತೆಯ ಸಂಗಮವಾದ ಕ್ರಿಸ್ಮಸ್ ಸಂಭ್ರಮಾಚರಣೆ ಪ್ರಯುಕ್ತ ಆಶ್ರಮದ ಎಲ್ಲಾ ನಿವಾಸಿಗಳೊಂದಿಗೆ ಸಹಭೋಜನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಜವಬ್ದಾರಿಗಳನ್ನು ಬಳಗದವರಿಗೆ ನೀಡಲಾಯಿತು. ಸಮಾರಂಭದ ಪೂರ್ವಭಾವಿ ಸಭೆಯ ಪ್ರಾರಂಭದಲ್ಲಿ ಸಂಚಾಲಕರಾದ ನಾಗೇಂದ್ರಕುಮಾರ್ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕರಾದ ಬ್ರಿಷ್ಟನ್ ರೊಡ್ರಿಗಸ್ ರವರು ತಮ್ಮ ಪೂರ್ವ ತಯಾರಿ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಾಗೇಂದ್ರ ಕುಮಾರ್, ಭಾಸ್ಕರ್ ರಾವ್ ಕು| ಅಪ್ಪಿಲತಾ, ವಿಕಾಸ್ ಶೆಟ್ಟಿ, ಪಿಯೂಸ್ ಮೊಂತೆರೋ, ಸೇಸಮಕ್ಕ , ಸತೀಶ್ ಪೆಂಗಲ್, ವಿಜಯ್ ಅರಾನ್ಹ, ಟಿ.ಸಿ. ಗಣೇಶ್, ಜೇಮ್ಸ್ ಪ್ರವೀಣ್, ರಿತೇಶ್ ಶಕ್ತಿನಗರ, ಅನಂದ್ ಸೋನ್ಸ್ ಇಮ್ರಾನ್, ನೀತು ಡಿʼಸೋಜಾ, ಆಲ್ ಸ್ಟೀನ್ ಡಿಕುನ್ಹ, ಡಿಂಪಲ್, ಮುಂತಾದವರು ಉಪಸ್ಥಿತರಿದ್ದರು.