ಮಂಗಳೂರು : ಸುಮಾರು 40 ವರ್ಷಗಳ ಇತಿಹಾಸವಿರುವ ಬ್ರಹ್ಮಶ್ರೀ ನಾರಾಯಣ ಗುರು ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಡಿಸೆಂಬರ್ ಡಿಸೆಂಬರ್ 11ರಂದು ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಸುರತ್ಕಲ್ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ವಠಾರದಲ್ಲಿ ನಡೆಯಲಿದೆ. ಶ್ರೀ ನವೀನ್ ಕುಮಾರ್ ,ಆಡಳಿತ ಅಧಿಕಾರಿ ಶ್ರೀ ಕ್ಷೇತ್ರ ಶ್ರೀ ಮಹಾಗಣಪತಿ ದೇವಸ್ಥಾನ ಗಣೇಶಪುರ ಇವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಗೀತಾ ಸುರತ್ಕಲ್ ಸಮ್ಮೇಳನ ಅಧ್ಯಕ್ಷರು ಹಿರಿಯ ಸಾಹಿತಿಗಳಾಗಿ ರಂಗಭೂಮಿ ಕಿರುತೆರೆ ಹಾಗೂ ಚಲನಚಿತ್ರಗಳ ನಟಿ ನಿರ್ದೇಶಕಿ ನಿರ್ಮಾಪಕ ವಸ್ತ್ರ ವಿನ್ಯಾಸಗಾರ್ತಿಯಾಗಿ ಸಾಹಿತ್ಯ ರಂಗಭೂಮಿ ದೂರದರ್ಶನ ಚಲನಚಿತ್ರಗಳಿಗೆ ಅನುಪಮಾ ಕೊಡುಗೆ ಹಾಗೂ ಸ್ತ್ರೀಶಕ್ತಿಕರಣ ಪ್ರಬಲ ಧ್ವನಿಯಾಗಿ ಉತ್ತಮ ಸಂಘಟಕಿಯಾಗಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರ ಧ್ವಜಾರೋಹಣವನ್ನು ಶ್ರೀ ಪಿ. ದಯಾಕರ್ ಅಧ್ಯಕ್ಷರು ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮಾಡಲಿದ್ದಾರೆ. ಪರಿಷತ್ತಿನ ಧ್ವಜಾರೋಹಣ ಡಾ.ಎಂ ಪಿ ಶ್ರೀನಾಥ, ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಮಂಜುನಾಥ ರೇವಣ್ ಕರ್ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಮಾಡಲಿದ್ದಾರೆ. ಪುಸ್ತಕ ಪ್ರದರ್ಶನದ ಮಳಿಗೆಯ ಉದ್ಘಾಟನೆಯನ್ನು ಶ್ರೀ ಧರ್ಮೇಂದ ಗಣೇಶಪುರ ಮಾಡಲಿದ್ದಾರೆ. ಸಮ್ಮೇಳನ ಉದ್ಘಾಟನೆಯನ್ನು ಕರ್ಮಯೋಗಿ ಡಾ ಹರಿಕೃಷ ಪುನರೂರು ಮಾಜಿ ಅಧ್ಯಕ್ಷರು ಕರ್ನಾಟಕ ರಾಜ್ಯ ಸಾಹಿತ್ಯ ಪರಿಷತ್ತು ಇವರು ಮಾಡಲಿದ್ದಾರೆ. ನಾರಾಯಣಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಆಚರಣೆಯ ಈ ಶುಭ ಸಂದರ್ಭದಲ್ಲಿ ಭಾರತದ ಸಂತ ತತ್ತ್ವಗಳು ಮತ್ತು ನಾರಾಯಣ ಗುರುಗಳ ತತ್ತ್ವಗಳು ಎಂಬ ವಿಷಯದ ಬಗ್ಗೆ ಬರೆದಿರುವ ಶ್ರೀಮತಿ ಗುಣವತಿ ರಮೇಶ್ ರವರ ಕೃತಿ ಬಿಡುಗಡೆ ಮಾಡಲಿರುವವರು ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ನಿಕಟ ಪೂರ್ವ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಮುಖ್ಯ ಅತಿಥಿ ಜೇಮ್ಸ್ ಕುಟಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ಉತ್ತರ ವಲಯ, ಶ್ರೀ ಪ್ರಭಾಕರ ನೀರು ಮಾರ್ಗ, ಶಕುಂತಲಾ ಭಟ್ ಶಶಿಲೇಖ ಬಿ, ಡಾ ಮೀನಾಕ್ಷಿ ರಾಮಚಂದ್ರ, ಮಹಾಬಲ ಪೂಜಾರಿ ಕಡಂಬೋಡಿ, ಉಮೇಶ್ ಕರ್ಕೇರ, ವಿನಯ ಆಚಾರ್ಯ ಪ್ರೊಕೃಷ್ಣಮೂರ್ತಿ, ಅಧ್ಯಕ್ಷತೆಯನ್ನು ಡಾ. ಎಂ ಪಿ ಶ್ರೀನಾಥ್ ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಡಾ| ಗಣೇಶ್ ಅಮೀನ್ ಸಂಕಮಾರ್ ಸಾಹಿತಿ ತುಳು ವಿದ್ವಾಂಸರು, ಸಮಾರೋಪ ಭಾಷಣ ಮಾಡಲಿದ್ದಾರೆ.ಶ್ರೀ ಪಿ ದಯಾಕರ್, ವೀಣಾ ಶೆಟ್ಟಿ ಶಕುಂತಲಾ ಟಿ ಶೆಟ್ಟಿ, ಡಾ ಜ್ಯೋತಿ ಚೇಳ್ಯಾರು ಡಾ| ಸುಧಾರಾಣಿ, ಶ್ರೀ ಸಂತೋಷ್ ಪೈ ಶ್ರೀ ರಾಬರ್ಟ್ ಪೌಲ್ ಡಿಸೋಜಾ ಶ್ರೀ ಲೋಕೇಶ್ ಬೋಲಾಜಿ ಮೈಮುನಾ ಮೋಹಿದೀನ್ ಶ್ರೀ ಲೋಕೇಶ್ ಅಮೀನ್ ಶ್ರೀ ಅಗರಿ ರಾಘವೇಂದ್ರ ರಾವ್ ಶ್ರೀ ಭಾಸ್ಕರ್ ರಾವ್ ಶ್ರೀಧರ್ಮ ಪಾಲ್, ಶ್ರೀಮತಿ ಸುರೇಖಾ ಚಿದಾನಂದ ಶ್ರೀ ಮಹಾವೀರ್ ಜೈನ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ಸಾಧನ ಸಿರಿ ಪುರಸ್ಕಾರ ನೀಡಲಿದ್ದೇವೆ, ಸಮಾಜ ಸೇವ ತಂಡಗಳನ್ನು ಗುರುತಿಸಿ ಗೌರವಿಸಲಿದ್ದೇವೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಸುರತ್ಕಲ್ ಪರಿಸರದ ಸಂಘ-ಸಂಸ್ಥೆಗಳು ಸಹಕಾರವನ್ನು ನೀಡಲಿದ್ದಾರೆ. ಎಲ್ಲರ ಸಹಕಾರದೊಂದಿಗೆ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಎಂದು ಡಾ.ಎಂ.ಪಿ. ಶ್ರೀನಾಥ ಅಧ್ಯಕ್ಷರು ,ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ