image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಾಂತ್ರಿಕ ದೋಷದಿಂದ ಮೀನುಗಾರಿಕಾ ಬೋಟ್ ನಲ್ಲಿ ಬೆಂಕಿ: ಮೀನುಗಾರರು ಅಪಾಯದಿಂದ ಪಾರು

ತಾಂತ್ರಿಕ ದೋಷದಿಂದ ಮೀನುಗಾರಿಕಾ ಬೋಟ್ ನಲ್ಲಿ ಬೆಂಕಿ: ಮೀನುಗಾರರು ಅಪಾಯದಿಂದ ಪಾರು

ಮಂಗಳೂರು:ಮೀನುಗಾರಿಕೆಗೆ ತೆರಳಿದ್ದ ಬೋಟ್ ತಾಂತ್ರಿಕ ದೋಷದಿಂದ ಮುಳುಗಿ ಅಪಾರ ನಷ್ಟ ಉಂಟಾಗಿದೆ ಎಂದು ನಗರದ ಕಂಕನಾಡಿಯ ಮುಹಮ್ಮದ್ ಫಾರೂಕ್ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರು ಮತ್ತು ಕರಾವಳಿ ಕಾವಲು ಪೊಲೀಸ್ ಘಟಕಕ್ಕೆ ದೂರು ನೀಡಿದ್ದಾರೆ.ತನ್ನ ಮಗಳು ಫಾತಿಮಾ ಶಾಫಾ ಮಾಲಕತ್ವದ ಮಶ್ರಿಕ್ ಎಂಬ ಹೆಸರಿನ ಬೋಟ್ ಡಿ.10ರ ಮುಂಜಾನೆ 4:30ಕ್ಕೆ ಬಂದರ್ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಅದರಲ್ಲಿ ಒಟ್ಟು 7 ಮಂದಿ ಮೀನುಗಾರರು ಇದ್ದು, ಸುರತ್ಕಲ್-ಕಾಪು ಕರಾವಳಿ ತೀರದಿಂದ ಸುಮಾರು 12 ನಾಟಿಕಲ್ ಮೈಲ್ ಉತ್ತರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಅಂದರೆ ಡಿ.10ರ ಸಂಜೆ 6:15ಕ್ಕೆ ಬೋಟಿನ ಇಂಜಿನ್ ಕಡೆಯಿಂದ ಬೆಂಕಿ ಕಾಣಿಸಿಕೊಂಡಿತು. ಬೋಟಿನಲ್ಲಿದ್ದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರೂ ಆಗಲಿಲ್ಲ. ತಕ್ಷಣ ಸಮೀಪದಲ್ಲೇ ಇದ್ದ ಮಿಝಾನ್ ಎಂಬ ಹೆಸರಿನ ಬೋಟಿನವರಿಗೆ ಮಾಹಿತಿ ನೀಡಿದ್ದು, ಅವರ ಸಹಾಯದಿಂದ ಮಶ್ರಿಕ್ ಬೋಟಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಬೆಂಕಿ ಆಕಸ್ಮಿಕದಿಂದ ಬೋಟ್ ಸಂಪೂರ್ಣ ಸುಟ್ಟು ಹೋಗಿದ್ದು, ಸುಮಾರು 1 ಕೋ.ರೂ. ನಷ್ಟ ಸಂಭವಿಸಿದೆ ದೂರಿನಲ್ಲಿ ತಿಳಿಸಲಾಗಿದೆ

Category
ಕರಾವಳಿ ತರಂಗಿಣಿ