ಮಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಈ ಕೆಳಕಂಡ ಯೋಜನೆಗಳಿಗೆ 2025-26ನೇ ಸಾಲಿನಲ್ಲಿ ಸಾಲ ಸಹಾಯಧನ ಸೌಲಭ್ಯ ಪಡೆಯಲು ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ಅವಧಿಯನ್ನು ಡಿಸೆಂಬರ್ 25 ರವರೆಗೆ ವಿಸ್ತರಿಸಲಾಗಿದೆ.
ಯೋಜನೆಗಳ ವಿವರ: ಅರಿವು ವಿಧ್ಯಾಭ್ಯಾಸ ಸಾಲ ಯೋಜನೆ, ವಿದೇಶಿ ವಿಧ್ಯಾಭ್ಯಾಸ ಸಾಲಯೋಜನೆ, ಸ್ವಾಲಂಬಿ ಸಾರಥಿಯೋಜನೆ (ಟ್ಯಾಕ್ಸಿಮತ್ತುಆಟೋರಿಕ್ಷಾ ವಾಹನ ಖರೀದಿಸಲು ಸಹಾಯಧನ ಯೋಜನೆ), ಶ್ರಮಶಕ್ತಿ ಯೋಜನೆ, ಶ್ರಮಶಕ್ತಿ ವಿಶೇಷ ಮಹಿಳಾಯೋಜನೆ, ವೃತ್ತಿ ಪ್ರೋತ್ಸಾಹ ಯೋಜನೆ, ಗಂಗಾಕಲ್ಯಾಣ ಯೋಜನೆ, ವ್ಯಾಪಾರ ಉದ್ದಿಮೆ/ ನೇರಸಾಲ ಯೋಜನೆ, ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ಯೋಜನೆ, ಸಮುದಾಯ ಆಧಾರಿತ ಕೌಶಲ್ಯ ಅಭಿವೃದ್ದಿ ತರಬೇತಿಗಳು
ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಗರದ ಪಾಂಡೇಶ್ವರದ 2 ನೇ ಮಹಡಿಯ ಮೌಲಾನಾ ಅಜಾದ್ ಭವನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ದೂರವಾಣಿ ಸಂಖ್ಯೆ: 0824-2951644 /ಸಹಾಯವಾಣಿ: 6360753075) ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.