ಉಜಿರೆ: ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾದ ಅತಿವಂದನೀಯ ಜೇಮ್ಸ್ ಪಟ್ಟೇರಿಲ್ ಬುಧವಾರ ಧರ್ಮಸ್ಥಳಕ್ಕೆ ಬಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ನೂತನ ಧರ್ಮಾಧ್ಯಕ್ಷರನ್ನು ಅಭಿನಂದಿಸಿ ಗೌರವಿಸಿದರು. ಧರ್ಮಪ್ರಾಂತ್ಯದ ಚಾನ್ಸಲರ್ ಲಾರೆನ್ಸ್ ಅಬ್ರಹಾಂ ಪಟ್ಟೇರಿಲ್, ಫಾದರ್ ಜೋಸೆಫ್ ವಾಳೂಕಾರನ್, ಚರ್ಚ್ ಪಾಲನಾ ಮಂಡಳಿ ಸದಸ್ಯರಾದ ಟಿ.ವಿ. ದೇವಸ್ಯ ಮತ್ತು ಜೋಮಿ ಉಪಸ್ಥಿತರಿದ್ದರು.