image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ನಡೆಯಲಿದೆ ರಾಷ್ಟ್ರೀಯ ಓಪನ್ ಪಿಡೇ ರೇಟೆಡ್ ಚೆಸ್ ಪಂದ್ಯಾವಳಿ

ಮಂಗಳೂರಿನಲ್ಲಿ ನಡೆಯಲಿದೆ ರಾಷ್ಟ್ರೀಯ ಓಪನ್ ಪಿಡೇ ರೇಟೆಡ್ ಚೆಸ್ ಪಂದ್ಯಾವಳಿ

ಮಂಗಳೂರು : ರಾಷ್ಟ್ರೀಯ ಓಪನ್/ಕ್ಲಾಸಿಕಲ್ ಪಿಡೇ ರೇಟೆಡ್ ಚೆಸ್ ಪಂದ್ಯಾವಳಿ ಇದೇ ಡಿಸೆಂಬರ್ ತಿಂಗಳ 26 ರಿಂದ 30 ರ ತನಕ ಮಂಗಳೂರು ಊರ್ವ ಸ್ಟೋರ್ ಬಳಿಯ "ತುಳು ಭವನ" "ಅಮ್ರತ ಸೋಮೇಶ್ವರ" ಸಭಾಂಗಣದಲ್ಲಿ ನಿರಂತರ 5 ದಿನ 9 ಸುತ್ತುಗಳಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದೊಂದಿಗೆ ನಡೆಯಲಿದೆ ಎಂದು ಡಾ.ಅಮರಶ್ರೀ ಅಮರನಾಥ ಶೆಟ್ಟಿ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ನಮ್ಮ ದೇಶದಲ್ಲಿ ಚೆಸ್ ದಿನೇ ದಿನೇ ಬಹಳ ವೇಗವಾಗಿ ಬೆಳೆಯುತ್ತಿರುವ ಕ್ರೀಡೆಯಾಗಿದ್ದು, ಈಗ ನಮ್ಮ ದೇಶ ಪುರುಷ ಹಾಗೂ ಮಹಿಳಾ ವಿಭಾಗದಲ್ಲಿವಿಶ್ವ ಚಾಂಪಿಯನ್ ಅಲ್ಲದೇ, ವೈಯಕ್ತಿಕ ವಿಭಾಗದಲ್ಲಿಯೂ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು ಹೆಮ್ಮೆಯ ವಿಷಯವಾಗಿದೆ. ನಮ್ಮ ಜಿಲ್ಲೆಯು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಹೊಂದಿದೆ. ಚೆಸ್ ಆಟದ ಬೆಳವಣಿಗೆಯ ಪೂರಕವಾಗಿ ನಾವು ಈ ಪಂದ್ಯಾಟವನ್ನು ಹಮ್ಮಿಕೊಂಡಿದ್ದು, ಇದರಲ್ಲಿ,ಬೇರೆ ಬೇರೆ ರಾಜ್ಯಗಳ ಆಟಗಾರರು ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರ ಸಹಿತ ಸುಮಾರು 400 ಆಟಗಾರರು ಭಾಗವಹಿಸುವ ನಿರೀಕ್ಷೆಯಲ್ಲಿದ್ದೇವೆ. ಮಂಗಳೂರು ನಗರ ಚೆಸ್ ಆಟದಲ್ಲಿ/ಪಂದ್ಯಾವಳಿಯಲ್ಲಿ ನಮ್ಮ ದೇಶಕ್ಕೇ ಮಾದರಿಯಾಗುತ್ತಾ, ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ಹಾಗೂ ಉತ್ತಮ ಆಟಗಾರರನ್ನು ಪರಿಚಯಿಸುತ್ತಿದೆ. ಇದಕ್ಕೆ ಪೂರಕವಾಗಿ ನಮ್ಮ ಜಿಲ್ಲೆಯ 'ಇಶಾ ಶರ್ಮ' WGM(women's Grand Master) ಆಗಿ ಹೊರ ಹೊಮ್ಮಿದ್ದು ಇವರು ಕರ್ನಾಟಕದ ಪ್ರಥಮ ಮಹಿಳೆಯಾಗಿದ್ದಾರೆ ಎಂದರು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಅಧಾನಿ ಸಮೂಹದ ಶ್ರೀ ಕಿಶೋರ್ ಆಳ್ವಾ ನೆರೆವೇರಿಸಲಿದ್ದು,  ಮುಖ್ಯ ಅತಿಥಿಗಳಾಗಿ, KSCA ಅಧ್ಯಕ್ಷ ಶ್ರೀ ಮದುಕರ್,, ಉದ್ಯಮಿ ರವಿರಾಜ್ ಶೆಟ್ಟಿ, ಅನಿಲ್ ಲೋಬೋ ಅದ್ಯಕ್ಕರು, MCC Bank, ಭಾಸ್ಕರ್ ರೈ ಕಟ್ಟ ಅಧ್ಯಕ್ಷರು ರೋಟರಿ ಕ್ಲಬ್ ಮಂಗಳೂರು ಹಾಗೂ ಹಲವಾರು ಗಣ್ಯರು ಭಾಗವಹಿಸಲಿರುವರು. ಅಲ್ಲದೇ, ತಾರೀಕು 30ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ.ಮೋಹನ ಆಳ್ವಾ ಸಹಿತ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ ಎಂದರು. ಟೂರ್ನಿಯು 6 ಲಕ್ಷ ನಗದು ಬಹುಮಾನ, ಅಲ್ಲದೇ ವಿವಿಧ ವಿಭಾಗಗಳ ಟ್ರೋಫಿ ಜೊತೆಗೆ ಸುಮಾರು ಇನ್ನೂರು ಬಹುಮಾನಗಳು ಇರಲಿವೆ ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ  ಸುನೀಲ್ ಆಚಾರ್, ರಮೇಶ್ ಕೋಟೆ,  ಭಾಸ್ಕರ್ ರೈ ಕಟ್ಟಾ, ರಾಜಗೋಪಾಲ್ ರೈ,  ಶ್ರೀಮತಿ ವಾಣಿ ಎಸ್ ಪಣಿಕ್ಕರ್,   ಸತ್ಯಪ್ರಸಾದ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ