image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಂತೋಷ ಮತ್ತು ಏಕತೆಯೊಂದಿಗೆ ಎಫ್ ಎಮ್ ಸಿ ಐ ಕಂಕನಾಡಿ ಕ್ಯಾಂಪಸ್ ನಲ್ಲಿ ಕ್ರಿಸ್ಮಸ್ ಆಚರಣೆ

ಸಂತೋಷ ಮತ್ತು ಏಕತೆಯೊಂದಿಗೆ ಎಫ್ ಎಮ್ ಸಿ ಐ ಕಂಕನಾಡಿ ಕ್ಯಾಂಪಸ್ ನಲ್ಲಿ ಕ್ರಿಸ್ಮಸ್ ಆಚರಣೆ

ಮಂಗಳೂರು : ಫಾದರ್ ಮುಲ್ಲರ್ ಚಾರಿಟಬಲ್ ಇನ್‌ಸ್ಟಿಟ್ಯೂಷನ್ಸ್ (ಎಫ್ ಎಮ್ ಸಿ ಐ), ಕಂಕನಾಡಿ ಕ್ಯಾಂಪಸ್ ನಲ್ಲಿ ಕ್ರಿಸ್ಮಸ್ ಆಚರಣೆ ನಡೆಯಿತು.  ಬೋಧಕವರ್ಗ, ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಗಣೇಶ್ ಸಂಜೀವ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಭಾರತದಲ್ಲಿ ಹಬ್ಬಗಳ ಒಗ್ಗೂಡಿಸುವ ಸ್ವರೂಪದ ಬಗ್ಗೆ ವಿವರಿಸಿದರು. ಇಂತಹ ಆಚರಣೆಗಳು ಬಹುತ್ವ, ಸಾಮರಸ್ಯವನ್ನು ಹೆಚ್ಚಿಸುತ್ತವೆ ಮತ್ತು ಸಮಾಜದಲ್ಲಿ ಶಾಂತಿ ಮತ್ತು ಸಂತೋಷವನ್ನು ಹರಡಿಸುವ ಕಾರ್ಯನಿರ್ವಹಿಸುತ್ತವೆ ಎಂದರು.

ಎಫ್ ಎಮ್ ಸಿ ಐ ನಿರ್ದೇಶಕ ರೆವ್. ಫಾದರ್ ಫೌಸ್ಟೈನ್ ಲ್ಯೂಕಾಸ್ ಲೋಬೊ ಅವರು ಅಧ್ಯಕ್ಷೀಯ ಭಾಷಣದಲ್ಲಿ ಕ್ರಿಸ್‌ಮಸ್‌ನ ನಿಜವಾದ ಚೈತನ್ಯವನ್ನು ನೀಡುವ, ಪ್ರೀತಿ ಮತ್ತು ಕರುಣೆಯ ಋತುವಾಗಿ ಪ್ರತಿಫಲಿಸಿದರು. ಪ್ರೀತಿಸುವ ಮತ್ತು ಹಂಚಿಕೊಳ್ಳುವ ಸಂತೋಷವು ವರ್ಷವಿಡೀ ಅನುರಣಿಸುವಂತೆ ಎಲ್ಲರಿಗೂ ಕರೆ ನೀಡಿದರು.

ವಿವಿಧ ಕಾಲೇಜುಗಳು ಒಟ್ಟುಗೂಡಿ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದವು. ಇದರಲ್ಲಿ ಫಾದರ್ ಮುಲ್ಲರ್ ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್‌ನ ವೇದಿಕೆ ಪ್ರಸ್ತುತಿ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಮಧುರ ಇಂಗ್ಲಿಷ್ ಮತ್ತು ಸ್ಥಳೀಯ ಕ್ರಿಸ್ಮಸ್ ಗಾಯನ, ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್‌ನ ಅರ್ಥಪೂರ್ಣ ಕ್ರಿಸ್ಮಸ್ ನಾಟಕ ಮತ್ತು ಫಾದರ್ ಮುಲ್ಲರ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಫಾದರ್ ಮುಲ್ಲರ್ ಕಾಲೇಜ್ ಆಫ್ ಫಾರ್ಮಸಿಯ ಉತ್ಸಾಹಭರಿತ ಕ್ರಿಸ್ಮಸ್ ನೃತ್ಯ ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮವನ್ನು ರೆವ್. ಫಾದರ್ ಜಾರ್ಜ್ ಜೀವನ್ ಸೀಕ್ವೇರಾ ಮತ್ತು ರೆವ್. ಫಾದರ್ ವಿಲಿಯಂ ಡಿ'ಸೋಜಾ ಅವರು ನಿರ್ವಹಿಸಿದರು. ನಿರ್ದೇಶಕರು ಮತ್ತು ಮುಖ್ಯ ಅತಿಥಿಗಳು ಕ್ರಿಸ್‌ಮಸ್ ಕೇಕ್ ಕತ್ತರಿಸಿ ಸಂಭ್ರಮಿಸಿದರು, ಎಫ್ ಎಮ್ ಸಿ ಐ ಕ್ಯಾಲೆಂಡರ್ ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಪ್ರೊಡಕ್ಷನ್ ವಿಭಾಗದ ಕ್ಯಾಲೆಂಡರ್ ಇದೆ ಸಂಧರ್ಭದಲ್ಲಿ ಅತಿಥಿಗಳು ಬಿಡುಗಡೆ ಮಾಡಿದರು. 

Category
ಕರಾವಳಿ ತರಂಗಿಣಿ