image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಡ್ಯಾರ್ ಗ್ರಾಮೋತ್ಸವ ಇತರ ಗ್ರಾಮಗಳಿಗೂ ಮಾದರಿಯಾಗಲಿ-ನರೇಂದ್ರ ನಾಯಕ್

ಅಡ್ಯಾರ್ ಗ್ರಾಮೋತ್ಸವ ಇತರ ಗ್ರಾಮಗಳಿಗೂ ಮಾದರಿಯಾಗಲಿ-ನರೇಂದ್ರ ನಾಯಕ್

ಮಂಗಳೂರು: ಅಡ್ಯಾರು ಗ್ರಾಮ ಪಂಚಾಯತ್‌, ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‌ಮೆಂಟ್ ಇದರ ಸಂಯುಕ್ತ ಆಶ್ರಯದಲ್ಲಿ ‘ಅಡ್ಯಾರು ಗ್ರಾಮೋತ್ಸವ – 2025’ ಕಾರ್ಯಕ್ರಮವು ಡಿ.20ರ ಶನಿವಾರ ಸಹ್ಯಾದ್ರಿ ಕಾಲೇಜು ಮೈದಾನ, ಅಡ್ಯಾರಿನಲ್ಲಿ ವಿಜೃಂಭಣೆಯಿಂದ ಜರುಗಿತು.

‘ಸೌಹಾರ್ದಯುತ ಗ್ರಾಮ – ಸೌಹಾರ್ದಯುತ ಭಾರತ’ ಎಂಬ ಸಂದೇಶದೊಂದಿಗೆ ಆಯೋಜಿಸಲಾಗಿರುವ ಈ ಗ್ರಾಮೋತ್ಸವದ ಮುನ್ನ ವಿವಿಧ ಶಾಲಾ ಮಕ್ಕಳ ಆಕರ್ಷಕ ಪಥ ಪಸಂಚಲನ, ಡ್ರೋನ್ ಹಾರಾಟ, ಜಾನಪದ ನೃತ್ಯ ನಡೆಯಿತು. ಕಾರ್ಯಕ್ರಮವನ್ನು ಪಾರಿವಾಳ ಹಾರಿಸುವ ಮೂಲಕ ಚಾಲನೆ ಗಣ್ಯರು ಚಾಲನೆ ನೀಡಿದರು‌. 

ಎಕ್ಸ್ ಪರ್ಟ್ ಪರ್ಟ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್  ನಿರ್ದೇಶಕ ನರೇಂದ್ರ‌ ನಾಯಕ್ ರಿಬ್ಬನ್ ಕತ್ತರಿಸುವ ಮೂಲಕ ಪ್ರಕೃತಿ ಸಂಜೀವಿನಿ ಒಕ್ಕೂಟ ಹಾಗೂ ಗ್ರಾಮಸ್ಥರ ಸ್ವಸಹಾಯ ಗುಂಪುಗಳ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದರಲ್ಲದೆ, ತೆಂಗಿನ ಸಿರಿಯನ್ನು  ಅರಳಿಸುವ ಮೂಲಕ ಉದ್ಘಾಟನಾ ಸಮಾರಂಭ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, “ಮಕ್ಕಳು ಎಳವೆಯಲ್ಲೇ ಶಿಸ್ತು, ಸಂಯಮ ಬೆಳೆಸಿಕೊಳ್ಳಬೇಕು. ಗ್ರಾಮಗಳ ಜನರು ಒಗ್ಗಟ್ಟಾಗಿ ಸಂಘಸಂಸ್ಥೆಗಳು, ಗಣ್ಯರ ಕೂಡುವಿಕೆಯಿಂದ ಗ್ರಾಮೋತ್ಸವ ನಡೆಸಿ ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಏಕತೆಯನ್ನು ಏಕತೆಯನ್ನು ಸಾರಬೇಕು. ಅಡ್ಯಾರ್ ಗ್ರಾಮೋತ್ಸವ ಇತರ ಗ್ರಾಮಗಳಿಗೂ ಮಾದರಿ ಕಾರ್ಯಕ್ರಮವಾಗಬೇಕು“ ಎಂದರು.

ಮುಖ್ಯ‌ ಅತಿಥಿಯಾಗಿದ್ದ ಮಿನರ್ವ ಕಾಲೇಜ್ ಎಂಡಿ ಮನೋಜ್ ಕುಮಾರ್ ಮಾತನಾಡಿ, ”ಇಂದು ರಸ್ತೆ ಅಪಘಾತ ಹೆಚ್ಚಾಗುತ್ತಿದ್ದು, ಮಕ್ಕಳು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ರಸ್ತೆಯಲ್ಲಿ ವಾಹನ ಚಲಾಯಿಸುವಾಗ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುವುದಲ್ಲದೆ ರಸ್ತೆ ದಾಟವಾಗ ಎಚ್ಚರವಹಿಸಬೇಕು“ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಡ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್‌ ಮಾತನಾಡಿ, “ಗ್ರಾಮೋತ್ಸವ ನಡೆಸಲು ನಮಗೆ ಎಲ್ಲರ ಸಹಕಾರ ಸಿಕ್ಕಿದೆ. ಗ್ರಾಮದ ಜನರು ಸೇರಿಕೊಂಡು ಗ್ರಾಮದ ಜನರ ಅನೋನ್ಯತೆ, ಸೌಹಾರ್ದತೆಯನ್ನು ಹೆಚ್ಚಿಸುವ  ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೊಜಿಸಲಾಗಿದೆ. ಮುಂದೆಯೂ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು“ ಎಂದರು.ಬಳಿಕ ಅಡ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.

ವೇದಿಕೆಯಲ್ಲಿ ಅಡ್ಯಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಝೋಹರಾ, ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಸುರೇಂದ್ರ ಕಂಬಳಿ, ಪ್ರಕೃತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯಲಕ್ಷ್ಮಿ , ಪಿಡಿಓ ಅಬ್ದುಲ್ ಆಶಫ್, ಮಾಜಿ ಪಂಚಾಯತ್ ಅಧ್ಯಕ್ಷರು ಅಬ್ದುಲ್ ಸತ್ತಾರ್ ಮತ್ತಿತರರು ಉಪಸ್ಥಿತರಿದ್ದರು. ವಿಜೆ ಮನೋಜ್ ಕುಮಾರ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು. ಪ್ರಕೃತಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು  ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಪ್ರದರ್ಶನಗಳು ನಡೆದವು.

Category
ಕರಾವಳಿ ತರಂಗಿಣಿ